NationalPolitics

ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ನ ರೇವಂತ್‌ರೆಡ್ಡಿ ಮುನ್ನಡೆ

ಹೈದರಾಬಾದ್‌; ತೆಲಂಗಾಣದಲ್ಲಿ ಕಾಂಗ್ರೆಸ್‌ ಬಹುಮತ ಪಡೆದರೆ ರೇವಂತ್‌ರೆಡ್ಡಿ ಸಿಎಂ ಆಗೋದು  ಬಹುತೇಕ ಖಚಿತ. ರಾಜ್ಯ ಕಾಂಗ್ರೆಸ್‌ ಅಧ್ಯಕ್ಷರಾಗಿ ಅವರ ನೇತೃತ್ವದಲ್ಲೇ ಕಾಂಗ್ರೆಸ್‌ ಚುನಾವಣೆ ಎದುರಿಸಿದೆ. ಈ ಹಿನ್ನೆಲೆಯಲ್ಲಿ ಅವರಿಗೇ ಸಿಎಂ ಸ್ಥಾನ ದಕ್ಕುತ್ತದೆ ಎಂದು ಹೇಳಲಾಗುತ್ತಿದೆ. ಅಂದಹಾಗೆ ರೇವಂತ್‌ ರೆಡ್ಡಿ ಅವರು ಈ ಬಾರಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದ್ದರು. ಎರಡೂ ಕ್ಷೇತ್ರಗಳಲ್ಲಿ ರೇವಂತ್‌ ರೆಡ್ಡಿ ಮುಂದಿದ್ದಾರೆ.

ಕಾಮಾರೆಡ್ಡಿ ಹಾಗೂ ಕೋಡಂಗಲ್‌ ಕ್ಷೇತ್ರಗಳಿಂದ ರೇವಂತ್‌ ರೆಡ್ಡಿ ಸ್ಪರ್ಧೆಯಲ್ಲಿದ್ದಾರೆ. ಇಲ್ಲಿಯವರೆಗೆ ಅವರೇ ಮುನ್ನಡೆಯಲ್ಲಿದ್ದಾರೆ. ಎರಡೂ ಕ್ಷೇತ್ರಗಳಲ್ಲಿ ರೇವಂತ್‌ರೆಡ್ಡಿ ಗೆಲುವು ಸಾಧಿಸುವ ಸಾಧ್ಯತೆ ಇದೆ.

Share Post