CrimeDistricts

ಉಡುಪಿ ಕುಂದಾಪುರದಲ್ಲಿ ತಾರಕಕ್ಕೇರಿದ ಹಿಜಾಬ್‌ ವಿವಾದ: ಸಮವಸ್ತ್ರ ಕಡ್ಡಾಯ

ಉಡುಪಿ: ಕುಂದಾಪುರ-ಉಡುಪಿ ಶಾಲಾ-ಕಾಲೇಜುಗಳಲ್ಲಿ ಹಿಜಾಬ್‌ ವಿವಾದ ಭುಗಿಲೆದ್ದಿದೆ. ನಿನ್ನೆ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಜೈ ಶ್ರೀರಾಮ್‌ ಎಂದು ಘೋಷಣೆ ಕೂಗಿ ಕಾಲೇಜಿಗೆ ಬಂದಿದ್ರು ಅಂತಹ ವಿದ್ಯಾರ್ಥಿಗಳು ಕಾಲೇಜಿನ ಪ್ರಾಂಶುಒಆಲರು ತಡೆದಿದ್ದರು. ಇಂದು ಕೂಡ ಉಡುಪಿಯ ಭಂಡಾರ್ಕಸ್ ಕಾಲೇಜಿನಲ್ಲಿ ಹಿಜಾಬ್‌ ಧರಿಸಿ ಬಂದ ವಿದ್ಯಾರ್ಥಿನಿಯರನ್ನು ಪ್ರಾಂಶುಪಾಲರು ಒಳಗೆ ಬಿಡದೆ ತಡೆದಿದ್ದಾರೆ. ಈ ವಿಚಾರ ಈಗ ಎಲ್ಲೆಡೆ ಬಿಸಿ ಬಿಸಿ ಚರ್ಚೆಯಾಗುತ್ತಿದೆ.

ಶಾಲಾ-ಕಾಲೇಜುಗಳಲ್ಲಿ ಸಮವಸ್ತ್ರ ಬಿಟ್ಟು ಬೇರೆ ಉಡುಪು ಧರಿಸಲು ಸರ್ಕಾರ ಅನುಮತಿ ನೀಡಿಲ್ಲ ಹೀಗಾಗಿ ಹಿಜಾಬ್‌, ಕೇಸರಿ ಶಾಲು ಇತರೆ ಉಡುಪು ಧರಿಸದಂತೆ ಶಾಲಾ-ಕಾಲೇಜು ಆಡಳಿತ ಮಂಡಳಿಗಳು ಕಠಿಣ ನಿಲುವು ತಳೆದಿವೆ. ಈಹಿನ್ನೆಲೆಯಲ್ಲಿ ಹಿಜಾಬ್‌ ಧರಿಸಿ ಬಂದ ವಿದ್ಯಾರ್ಥಿನಿಯರನ್ನು ಆಡಳಿತ ಮಂಡಳಿ ಗೇಟಿನಲ್ಲಿ ತಡೆದಿದ್ದಾರೆ. ಇದು ಉಡುಪಿ-ಕುಂದಾಪುರದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾ ಉಸ್ತುವಾರಿ ಸಚಿವ ಅಂಗಾರ, ಸಮವಸ್ತ್ರ ಹೊರತುಪಡಿಸಿ ಬೇರೆ ಉಡುಗೆಗಳನ್ನು ಹಾಕಿ ಶಾಲಾ-ಕಾಲೇಜಿಗೆ ಬರದಂತೆ ತಾಕೀತು ಮಾಡಿದ್ರು. ಈ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡು, ಜಿಲ್ಲಾಡಳಿತದೊಂದಿಗೆ ಚರ್ಚಿಸಿ ಸಿಎಂ ಅವರ ಗಮನಕ್ಕೆ ತಂದು ಈ ಬಗ್ಗೆ ಇತಿಶ್ರೀ ಹಾಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವರು ತಿಳಿಸಿದ್ರು.

ಇನ್ನೂ ಗೃಹ ಸಚಿವ ಆರಗ ಜ್ಞಾನೇಂದ್ರ  ಮಾತನಾಡಿ. ವಿದ್ಯಾದೇಗುಲಗಳು ಎಲ್ಲರಿಗೂ ಒಂದೇ. ಇಲ್ಲಿ ಹಿಂದೂ, ಮುಸ್ಮೀ, ಕ್ರೈಸ್ತ ಎಂಬ ಭಾವನೆಯಲಿಲ್ಲ, ಎಲ್ಲರೂ ಒಂದಾಗಿ ಭಾರತ ಮಾತೆಯ ಮಕ್ಕಳಂತೆ ಕಲಿಯಬೇಕು. ಸಮವಸ್ತ್ರ ಬಿಟ್ಟು ಹಿಜಾಬ್‌, ಕೇಸರಿ, ಹಸಿರು ಶಾಲು ಯಾವುದೇ ಬಟ್ಟೆ ಧರಿಸುವಂತಿಲ್ಲ. ಈ ಬಗ್ಗೆ ಶಾಲಾ-ಕಾಲೇಕು ಆಡಳಿತ ಮಂಡಳಿ ಕ್ರಮ ತೆಗೆದುಕೊಳ್ಳಬೇಕು. ನಮ್ಮ ನಮ್ಮ ಧರ್ಮ ಬೋಧನೆಗೆ ಮಂದಿರ, ಮಸೀದಿ, ಚರ್ಚ್‌ಗಳಿವೆ ಅಲ್ಲಿ ಬೇಕಾದ್ರೆ ನಿಮ್ಮ ವಸ್ತ್ರಗಳನ್ನು ಧರಿಸಿ. ಆದರೆ ಶಾಲಾ-ಕಾಲೇಜು ವಿದ್ಯಾದೇಗುಲ ಇಲ್ಲಿ ಎಲ್ಲರೂ ಒಂದೇ ವಿದ್ಯಾರ್ಥಿಗಳು ಇದನ್ನು ಗಮನದಲ್ಲಿಟ್ಟುಕೊಂಡು ಯಾವುದೇ ದುರಂತಕ್ಕೆ ದಾರಿ ಮಾಡಿಕೊಡಬಾರದು. ಒನ್ನೇ ಅಸ್ತ್ರವಗಿ ಬಳಸಿ ಗಲಭೆ ಮಾಡಲು ಮತೀಯ ಸಂಘಟನೆಗಳು ಪ್ಲಾನ್‌ ಮಾಡಿದ್ರೆ ಪರಿಣಾಮ ಎದುರಿಬೇಕಾಗುತ್ತದೆ ಎಂದು ಗಂಭೀರವಾದ ಎಚ್ಚರಿಕೆ ನೀಡಿದ್ರು.

 

Share Post