CrimeNational

ರಾತ್ರಿಯಿಡೀ ಅಪ್ರಾಪ್ತನ ಜೊತೆ ಲಾಡ್ಜ್‌ನಲ್ಲಿ ಕಳೆದ ಬಾಲಕಿ!

ನವದೆಹಲಿ; ಸಂಜೆ ಮನೆಗೆ ಹೋಗದ 17 ವರ್ಷದ ಬಾಲಕಿ 19 ವರ್ಷದ ಹುಡುಗನ ಜೊತೆ ಲಾಡ್ಜ್‌ಗೆ ಹೋಗಿದ್ದಳು.. ಬೆಳಗ್ಗೆ ಆತಂಕದಿಂದಲೇ ಮನೆಗೆ ಬಂದ ಬಾಲಕಿಯನ್ನು ಸಹಜವಾಗಿಯೇ ಮನೆಯವರು ಪ್ರಶ್ನೆ ಮಾಡಿದ್ದಾರೆ.. ಈ ವೇಳೆ ಯುವಕನಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದೇನೆ ಎಂದು ಆಕೆ ಹೇಳಿದ್ದಾಳೆ.. ಅನಂತರ ಕೊಠಡಿಗೆ ಹೋಗಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ..
ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯ ಬಲ್ಲಾರ್‌ಪುರ ಎಂಬಲ್ಲಿ ಈ ಘಟನೆ ನಡೆದಿದೆ.. 19 ವರ್ಷದ ಯುವಕನ ಜೊತೆ ರಾತ್ರಿಯಿಡೀ ಬಾಲಕಿ ಕಳೆದಿದ್ದಾಳೆ.. ಇತ್ತ ಪೋಷಕರು ಮಗಳ ಮನೆಗೆ ಬರದಿದ್ದರಿಂದ ರಾತ್ರಿಯಿಡೀ ಹುಡುಕಿದ್ದಾರೆ.. ಕೊನೆಗೆ ಬಾಲಕಿಯೇ ಬೆಳಗ್ಗೆ ಮನೆಗೆ ಬಂದಿದ್ದಾಳೆ.. ಆಗ ದಬಾಯಿಸಿ ಕೇಳಿದಾಗ ಆಕೆ, ಲಾಡ್ಜ್‌ನಲ್ಲಿ ಯುವಕ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಿದ್ದಾಳೆ.. ಈ ವಿಷಯ ತಿಳಿಯುತ್ತಿದ್ದ ಪೋಷಕರು ಪೊಲೀಸರಿಗೆ ಮಾಹಿತಿ ನೀಡಿದ್ದು, ಯುವಕರನ್ನು ಬಂಧಿಸಿದ್ದಾರೆ.. ಈ ಸುದ್ದಿ ತಿಳಿಯುತ್ತಿದ್ದಂತೆ ಬಾಲಕಿ ಆತ್ಮಹತ್ಯೆಗೆ ಶರಣಾಗಿದ್ದಾಳೆ..
ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ಯುವಕ ಹಾಗೂ ಅಪ್ರಾಪ್ತರು ಕೊಠಡಿಯಲ್ಲಿ ಉಳಿದುಕೊಳ್ಳುವುದಕ್ಕೆ ಅವಕಾಶ ಕೊಟ್ಟ ಲಾಡ್ಜ್‌ ಮಾಲೀಕ ಹಾಗೂ ಲಾಡ್ಜ್‌ ಮ್ಯಾನೇಜರ್‌ನನ್ನು ಬಂಧಿಸಿದ್ದಾರೆ..

Share Post