CrimeNational

MiG-29K ಯುದ್ಧ ವಿಮಾನ ಪತನ..!

ಗೋವಾ; ಗೋವಾದಿಂದ ಹೊರಡುವ ವೇಳೆ MiG-29K ಯುದ್ಧ ವಿಮಾನ ಪತನವಾಗಿದೆ. ಅದೃಷ್ಟವಶಾತ್ ಪೈಲಟ್‌ ಸುರಕ್ಷಿತವಾಗಿ‌ ಹೊರಬಂದಿದ್ದಾರೆ.  ತಾಂತ್ರಿಕ ದೋಷ ಉಂಟಾದ ಹಿನ್ನೆಲೆಯಲ್ಲಿ  ವಿಮಾನ ಪತನವಾಗಿದೆ ಎಂದು ತಿಳಿದುಬಂದಿದೆ.

MiG 29K ಯುದ್ಧ ವಿಮಾನ ಬೇಸ್‌ಗೆ ಮರಳುತ್ತಿರುವಾಗ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಕೂಡಲೇ ಅದು ಗೋವಾದ ಸಮೀಪದ ಸಮುದ್ರದಲ್ಲಿ ಪತನಗೊಂಡಿದೆ. ಈ ವೇಳೆ ಪೈಲಟ್‌ ಹೊರಕ್ಕೆ ಹಾರಿ ಪ್ರಾಣ ರಕ್ಷಿಸಿಕೊಂಡಿದ್ದಾರೆ.  ರಕ್ಷಣಾ ಸಿಬ್ಬಂದಿ ತಕ್ಷಣವೇ ಕಾರ್ಯಾಚರಣೆಗಿಳಿದಿದ್ದರಿಂದ ಪೈಲಟ್‌ ಸಮುದ್ರದಲ್ಲಿ ಜೀವಂತವಾಗಿ ಪತ್ತೆಯಾಗಿದ್ದಾರೆ. ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿದುಬಂದಿದೆ.

ಈ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ.
Share Post