CrimeDistricts

ಪ್ರೇಯಸಿಗಾಗಿ ಕಳ್ಳತನಕ್ಕಿಳಿದ ಆನೇಕಲ್‌ನ ಪ್ರೇಮ ಖೈದಿ!

ಆನೇಕಲ್; ಪ್ರೇಯಸಿ ಜೊತೆ ಸುತ್ತಾಡಲು, ಐಶಾರಾಮಿ ಜೀವನ ನಡೆಸೋದಕ್ಕಾಗಿ ಯುವಕ ಮನೆಗಳ್ಳತನ ಆಯ್ಕೆ ಮಾಡಿಕೊಂಡಿದ್ದ.. ಹಾಡಹಗಲೇ ಮನೆಗಳ್ಳತನ ಮಾಡುತ್ತಿದ್ದ.. ಕೊನೆಗೂ ಆರೋಪಿ ಈಗ ಸಿಕ್ಕಿಬಿದ್ದಿದ್ದಾನೆ.. ಜಿಗಣಿ ಠಾಣೆ ಪೊಲೀಸರು ಲಕ್ಷ್ಮಣ್‌ ಅಲಿಯಾಸ್‌ ಗುನ್ನಿ ಎಂಬಾತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ..
ಇತ್ತೀಚೆಗೆ ಹಾಡಹಗಲೇ ಆನೇಕಲ್‌ ತಾಲ್ಲೂಕು ವಾಬಸಂದ್ರ ಮನೆಯಲ್ಲಿ ಕಳ್ಳತನವಾಗಿತ್ತು.. ಈ ಪ್ರಕರಣದ ಬೆನ್ನು ಹತ್ತಿದ ಪೊಲೀಸರು ಆರೋಪಿಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.. ಬಂಧಿತ ಆರೋಪಿಯಿಂದ 8 ಲಕ್ಷ ರೂಪಾಯಿ ಮೌಲ್ಯದ ಚಿನ್ನ ಹಾಗೂ ಬೆಳ್ಳಿಯ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.. ಈತ ಬನ್ನೇರುಘಟ್ಟ, ಜಿಗಣಿ, ಸರ್ಜಾಪುರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲೂ ಹಲವು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ ಎಂದು ಹೇಳಲಾಗುತ್ತಿದೆ..
ಆರೋಪಿಗೆ ಪ್ರೇಯಸಿ ಇದ್ದು, ಆಕೆಯ ಜೊತೆ ವಿಲಾಸಿ ಜೀವನ ನಡೆಸೋದಕ್ಕಾಗಿ ಕಳ್ಳತನದ ಹಾದಿ ಹಿಡಿದಿದ್ದ ಅಂತ ವಿಚಾರಣೆ ವೇಳೆ ಗೊತ್ತಾಗಿದೆ.. ಕದ್ದ ಚಿನ್ನವನ್ನು ಮಾರಾಟ ಮಾಡಿ, ಪ್ರೇಯಸಿ ಚೆನ್ನಾಗಿ ಖರ್ಚು ಮಾಡುತ್ತಿದ್ದ ಎಂದು ತಿಳಿದುಬಂದಿದೆ..

Share Post