BengaluruCrime

ಪತ್ನಿ ಶೀಲ ಶಂಕಿಸಿದ ಪತಿ; ಎದೆಗೆ ಇರಿದು ಕೊಲೆ ಮಾಡಿದ ಪತ್ನಿ!

ಬೆಂಗಳೂರು; ರಾತ್ರಿ ವೇಳೆ ಫೋನ್‌ ನಲ್ಲಿ ಯಾರ ಜೊತೆಯೋ ಹರಟೆ ಹೊಡೆಯುತ್ತಿದ್ದ ಪತ್ನಿಯ ಬಗ್ಗೆ ಕುಡುಕ ಪತಿ ಅನುಮಾನ ಪಟ್ಟಿದ್ದಾನೆ. ಯಾರ ಜೊತೆಯೋ ನಿನಗೆ ಅನೈತಿಕ ಸಂಬಂಧ ಇದೆ ಎಂದು ಜಗಳ ತೆಗೆದಿದ್ದಾನೆ. ಈ ಜಗಳ ವಿಕೋಪಕ್ಕೆ ತಿರುಗಿ ರೋಸಿಹೋದ ಪತ್ನಿ, ಪತಿಯ ಎದೆಗೆ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದಾಳೆ. ಬೆಂಗಳೂರಿನ ಹುಳಿಮಾವಿನ ಕಾಲೇಜೊಂದರಲ್ಲಿ ಈ ಘಟನೆ ನಡೆದಿದೆ.

ಈ ಕಾಲೇಜಿನಲ್ಲಿ ದಂಪತಿ ಸೆಕ್ಯೂರಿಟಿ ಗಾರ್ಡ್‌ ಹಾಗೂ ಹೌಸ್‌ ಕೀಪಿಂಗ್‌ ಕೆಲಸ ಮಾಡುತ್ತಾರೆ. ನಿನ್ನೆ ಸಂಜೆ ಮನೆಯಿಂದ ಹೊರಹೋಗಿದ್ದ ಪತ್ನಿ ಉಮೇಶ್‌ ದಾಳಿ ಕಂಠಪೂರ್ತಿ ಕುಡಿದು ಮಧ್ಯರಾತ್ರಿ ಬಂದಿದ್ದ. ಈ ವೇಳೆ ಪತ್ನಿ ಮನಿಷಾ ದಾಮಿ ಮೊಬೈಲ್‌ನಲ್ಲಿ ಯಾರ ಜೊತೆಯೂ ಮಾತನಾಡುತ್ತಿದ್ದಳು. ಇದರಿಂದ ಅನುಮಾನಗೊಂಡು ಪತಿ ಉಮೇಶ್‌ ದಾಮಿ ಜಗಳ ತೆಗೆದಿದ್ದಾನೆ.

ಆರೋಪಿ ಮನಿಷಾಳನ್ನು ಹುಳಿಮಾವು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ಧಾರೆ.

 

Share Post