ಸ್ವಂತ ಮಗಳ ಖಾಸಗಿ ವಿಡಿಯೋ ವೈರಲ್ ಮಾಡಿದ ತಂದೆ!; ಫಿನಾಯಿಲ್ ಕುಡಿದ ಮಗಳು!
ಉಡುಪಿ; ವ್ಯಕ್ತಿಯೊಬ್ಬ ತನ್ನ ಸ್ವಂತ ಮಗಳ ಖಾಸಗಿ ವಿಡಿಯೋಗಳನ್ನೇ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟು ಆಕೆಯ ಬದುಕನ್ನೇ ಬೀದಿಪಾಲು ಮಾಡಿದ್ದಾನೆ.. ಉಡುಪಿ ಜಿಲ್ಲೆ ಪಡುಬಿದ್ರಿಯ ಕಂಚಿನಡ್ಕದಲ್ಲಿ ಈ ಘಟನೆ ನಡೆದಿದೆ..
ಇದನ್ನೂ ಓದಿ; ಗಟ್ಟಿಮೇಳಕ್ಕೆ ಸರಿಯಾಗಿ ಮೊಬೈಲ್ ಮೊಳಗಿತು..!; ಮದುವೆ ಕ್ಯಾನ್ಸಲ್ ಮಾಡಿ ಹೊರಟ ವರ..!
ಕಂಚಿನಡ್ಕದ ಆಸೀಫ್ ಎಂಬಾತನ ಮಗಳು, ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಸಂಬಂಧಿ ತೌಸಿಫ್ ಎಂಬಾತನನ್ನು ಪ್ರೀತಿ ಮಾಡುತ್ತಿದ್ದಳು.. ಆದ್ರೆ ತಂದೆಗೆ ಇದು ಇಷ್ಟವಾಗಿಲ್ಲ.. ತೌಸಿಫ್‌ನನ್ನು ಮನೆಗೆ ಕರೆಸಿದ ಯುವತಿಯ ತಂದೆ, ಆತನನ್ನು ಹಿಗ್ಗಾಮುಗ್ಗಾ ಥಳಿಸಿದ್ದಾನೆ.. ಅನಂತರ ಇಬ್ಬರ ಮೊಬೈಲ್‌ಗಳನ್ನೂ ಕಿತ್ತುಕೊಂಡು ಅದರಲ್ಲಿದ್ದ ಅವರಿಬ್ಬರ ಖಾಸಗಿ ವಿಡಿಯೋಗಳನ್ನು ತನ್ನ ಮೊಬೈಲ್ ಗೆ ಕಳುಹಿಸಿಕೊಂಡಿದ್ದಾನೆ.. ಆ ವಿಡಿಯೋಗಳನ್ನು ಸಾಮಾಜಿಕ ಜಾಲತಾಣ ಹಾಗು ವಾಟ್ಸ್ ಆಪ್ ಗ್ರೂಪ್‌ಗಳಿಗೆ ಕಳುಹಿಸಿದ್ದಾನೆ..
ಇದನ್ನೂ ಓದಿ; ನೆಲದ ಮೇಲೆ ಕೂತು ತಿನ್ನುವುದೇ ಒಂದು ಯೋಗಾಸನ!; ಹೀಗೆ ತಿಂದರೆ ಈ ಕಾಯಿಲೆಗಳೆಲ್ಲಾ ಮಾಯ!
ಸ್ವಂತ ತಂದೆಯೇ ಈ ರೀತಿ ಮಾಡಿದ್ದರಿಂದ ಮನನೊಂದ ಪುತ್ರಿ ಫಿನಾಯಿಲ್ ಕುಡಿದು ಆತ್ಮಹತ್ಯೆಗೆ ಯತ್ನ ಮಾಡಿದ್ದಾರೆ.. ಸದ್ಯ ಆಕೆ ಈಗ ಅಜ್ಜರಕಾಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.. ಉಡುಪಿ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ..