CrimeDistricts

ಬೆಳಗಾವಿಯ ಅತ್ಯಾಚಾರಿಗೆ ಗಲ್ಲು ಶಿಕ್ಷೆ ವಿಧಿಸಿದ ಕೋರ್ಟ್‌!

ಬೆಳಗಾವಿ; ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ ಕಾಮುಕನಿಗೆ ಕೋರ್ಟ್‌ ಗಲ್ಲು ಶಿಕ್ಷೆ ವಿಧಿಸಿದೆ.. 2017ರಲ್ಲಿ ನಡೆದ ಪ್ರಕರಣದ ಸಂಬಂಧ ಬೆಳಗಾವಿಯ ಪೋಕ್ಸೋ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ಈ ಮಹತ್ವದ ತೀರ್ಪು ಕೊಟ್ಟಿದೆ..
ಬೆಳಗಾವಿ ಜಿಲ್ಲೆ ಹಾರೂಗೇರಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ 2017ರಲ್ಲಿ ಈ ಘಟನೆ ನಡೆದಿತ್ತು.. 32 ವರ್ಷದ ರಾಮಪ್ಪ ಗಾಣಿಗೇರ ಎಂಬ ಕಾಮುಕ ಮನೆಯ ಮುಂದೆ ಆಟವಾಡುತ್ತಿದ್ದ ಬಾಲಕಿಯನ್ನು ಪುಸಲಾಯಿಸಿದ್ದ.. ಚಾಕೋಲೇಟ್‌ ಕೊಡಿಸುತ್ತೇನೆ ಎಂದು ಆಕೆಯನ್ನು ಕಬ್ಬಿನ ಗದ್ದೆಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದ.. ಅಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಲ್ಲದೆ, ಉಸಿರುಗಟ್ಟಿಸಿ ಆಕೆಯನ್ನು ಕೊಲೆ ಮಾಡಿದ್ದ.
ಸುಮಾರು ಎಂಟು ವರ್ಷಗಳಿಂದ ಈ ಪ್ರಕರಣದ ವಿಚಾರಣೆ ನಡೆಯುತ್ತಿತ್ತು.. ಆರೋಪ ಸಾಬೀತಾದ ಕಾರಣ ಜಿಲ್ಲಾ ಸತ್ರ ನ್ಯಾಯಾಲಯ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಿದೆ.. ಜೊತೆಗೆ 45 ಸಾವಿರ ರೂಪಾಯಿ ದಂಡ ಕೂಡಾ ಹಾಕಲಾಗಿದೆ.. ಜೊತೆಗೆ ಜಿಲ್ಲಾ ಕಾನೂನು ಪ್ರಾಧಿಕಾರದಿಂದ ಬಾಲಕಿ ಪೋಷಕರಿಗೆ 3 ಲಕ್ಷ ಪರಿಹಾರ ನೀಡುವಂತೆಯೂ ಕೋರ್ಟ್‌ ಸೂಚನೆ ಕೊಟ್ಟಿದೆ..

Share Post