ನೀವು ಬಳಸುವ ಉಪ್ಪು ಯಾವುದು..?; ಯಾವ ಉಪ್ಪು ಯಾರಿಗೆ ಹೊಂದುತ್ತೆ..?
ಬೆಂಗಳೂರು; ಉಪ್ಪಿಗಿಂತ ರುಚಿ ಬೇರೆ ಇಲ್ಲ ಅಂತಾರೆ.. ಉಪ್ಪು ಇಲ್ಲದೆ ಬಹುತೇಕ ಯಾವುದೇ ಆಹಾರ ತಯಾರಿ ಮಾಡೋದಕ್ಕೆ ಆಗೋದಿಲ್ಲ.. ಪ್ರತಿಯೊಂದು ಅಡುಗೆಗೂ ಉಪ್ಪು ಇರಲೇಬೇಕು.. ಖಾರ ಮತ್ತು ಉಪ್ಪು ಸಮಯಪ್ರಮಾಣದಲ್ಲಿದ್ದಾಗ ಮಾತ್ರ ನಾವು ತಿನ್ನುವ ಆಹಾರಕ್ಕೆ ಟೇಸ್ಟ್ ಬರುತ್ತದೆ.. ಇತ್ತೀಚೆಗೆ ಬಿಪಿ ಕಾರಣದಿಂದ ಉಪ್ಪು ತಿನ್ನುವುದನ್ನು ಜನ ಕಡಿಮೆ ಮಾಡುತ್ತಿದ್ದಾರೆ.. ಆದ್ರೆ ಪೂರ್ತಿಯಾಗಿ ನಿಲ್ಲಿಸೋದಕ್ಕೆ ಅಂತೂ ಆಗೋದಿಲ್ಲ.. ಆ ಮಟ್ಟಿಗೆ ಉಪ್ಪು ನಮ್ಮನ್ನು ಆವರಿಸಿದೆ.. ಮೊದಮೊದಲು ಸಮುದ್ರದಲ್ಲಿ ಸಮಾನ್ಯ ಉಪ್ಪನ್ನು ಮಾತ್ರ ಎಲ್ಲರೂ ಬಳಕೆ ಮಾಡುತ್ತಿದ್ದರು.. ಆದ್ರೆ ಈ ಮಾರುಕಟ್ಟೆಯಲ್ಲಿ ನಾನಾ ರೀತಿಯ ಉಪ್ಪುಗಳು ಸಿಗುತ್ತವೆ.. ವೈದ್ಯರು ಕೂಡಾ ಬೇರೆ ಬೇರೆ ರೀತಿಯ ಉಪ್ಪುಗಳನ್ನು ಸಜೆಸ್ಟ್ ಮಾಡುತ್ತಿದ್ದಾರೆ.. ಸಮುದ್ರದಲ್ಲಿ ಸಿಗುವ ಉಪ್ಪು ಅಷ್ಟೇ ಅಲ್ಲದೆ, ವೈಟ್ ಸಾಲ್ಟ್, ಪಿಂಕ್ ಸಾಲ್ಟ್, ಬ್ಲ್ಯಾಕ್ ಸಾಲ್ಟ್ ಹೀಗೆ ನಾನಾ ತರದ ಉಪ್ಪು ಮಾರುಕಟ್ಟೆಯಲ್ಲಿ ಸಿಗುತ್ತದೆ.. ಆದ್ರೆ ಈ ಉಪ್ಪುಗಳಲ್ಲಿ ಯಾವುದರ ಬಳಕೆ ಒಳ್ಳೆಯದು..? ಯಾವ ಉಪ್ಪು ಸೇವಿಸುವುದರಿಂದ ಯಾವ ಅನುಕೂಲ ಆಗುತ್ತದೆ..? ಯಾರು ಯಾವ ಉಪ್ಪನ್ನು ಸೇವನೆ ಮಾಡಬೇಕು..? ಇತ್ಯಾದಿ ವಿಚಾರವನ್ನು ನಾವು ಇಲ್ಲಿ ತಿಳಿಯೋಣ..
ವೈಟ್ ಸಾಲ್ಟ್;
ಬಿಳಿ ಉಪ್ಪು ಅತ್ಯಂತ ಸುಲಭವಾಗಿ ಸಿಗುವ ಉಪ್ಪು.. ಸಾಮಾನ್ಯವಾಗಿ ಎಲ್ಲರೂ ಬಳಸುವ ಉಪ್ಪು ಇದೇ.. ಇದರಲ್ಲಿ ಯಾವುದೇ ಕಲ್ಮಶಗಳು ಇರುವುದಿಲ್ಲ.. ನುಣ್ಣಗಿನ ಉಪ್ಪು ಕೂಡಾ ಸಿಗುವುದರಿಂದ ಬಳಕೆ ತುಂಬಾ ಸುಲಭ.. ಇನ್ನು ಈ ಉಪ್ಪನ್ನು ಚೆನ್ನಾಗಿ ಸಂಸ್ಕರಿಸಿ ಪೂರೈಕೆ ಮಾಡಲಾಗುತ್ತದೆ.. ಅಯೋಡಿನ್‌ನೊಂದಿಗೆ ಈ ಉಪ್ಪನ್ನು ಸಂಸ್ಕರಿಸುವುದರಿಂದ ಥೈರಾಯ್ಡ್ ನಂತಹ ಸಮಸ್ಯೆಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಮಕ್ಕಳಲ್ಲಿ ಉತ್ತಮ ಮೆದುಳಿನ ಬೆಳವಣಿಗೆಗೆ ಅಯೋಡಿನ್ ಸಹ ಉಪಯುಕ್ತವೆಂದು ಪರಿಗಣಿಸಲಾಗಿದೆ. ಆದರೆ ಈ ಉಪ್ಪಿನ ಅತಿಯಾದ ಸೇವನೆ ಆರೋಗ್ಯಕ್ಕೆ ಹಾನಿಕರ ಎಂದೂ ಹೇಳಲಾಗುತ್ತದೆ.
ಬ್ಲ್ಯಾಕ್ ಸಾಲ್ಟ್;
ಕಪ್ಪು ಬಣ್ಣದಲ್ಲಿರುವ ಉಪ್ಪು ಕೂಡಾ ಮಾರುಕಟ್ಟೆಯಲ್ಲಿದೆ.. ಇದನ್ನು ಸೋಡಾ ಜೊತೆ ಹಾಕಿ ಕೊಡುತ್ತಾರೆ.. ಕೆಲವರು ಆಹಾರ ತಯಾರಿಕೆಯಲ್ಲೂ ಇದನ್ನು ಬಳಸುತ್ತಾರೆ.. ಸೂಪರ್ ಮಾರುಕಟ್ಟೆಗಳಲ್ಲಿ ಈ ಬ್ಲ್ಯಾಕ್ ಸಾಲ್ಟ್ ಸಿಗುತ್ತದೆ.. ಈ ಉಪ್ಪಿನ ತಯಾರಿಕೆಯಲ್ಲಿ ವಿವಿಧ ಮಸಾಲೆಗಳು, ಇದ್ದಿಲು, ಬೀಜಗಳು ಮತ್ತು ಮರಗಳ ತೊಗಟೆಯನ್ನು ಕೂಡಾ ಬಳಸಲಾಗುತ್ತದೆ. ಕಪ್ಪು ಉಪ್ಪನ್ನು ದೀರ್ಘಕಾಲದವರೆಗೆ ಒಲೆಯಲ್ಲಿ ಇರಿಸುವ ಮೂಲಕ ತಯಾರಿಸಲಾಗುತ್ತದೆ. ಆದ್ದರಿಂದ ಈ ಉಪ್ಪು ಈ ಬಣ್ಣವನ್ನು ಪಡೆಯುತ್ತದೆ. ಇದಲ್ಲದೆ, ಇದು ವಾಯು, ಮಲಬದ್ಧತೆ ಮತ್ತು ಆಮ್ಲೀಯತೆಯಂತಹ ಅನೇಕ ಕಾಯಿಲೆಗಳಿಗೆ ರಾಮಬಾಣವಾಗಿ ಕಾರ್ಯನಿರ್ವಹಿಸುತ್ತದೆ.
ಪಿಂಕ್ ಸಾಲ್ಟ್;
ಗುಲಾಬಿ ಬಣ್ಣದ ಉಪ್ಪು ಕೂಡಾ ಮಾರುಕಟ್ಟೆಯಲ್ಲಿ ಸಿಗುತ್ತದೆ.. ಇದು ಕಲ್ಲಿನ ರೂಪದಲ್ಲಿ ಸಿಗುತ್ತದೆ. ಈ ಉಪ್ಪನ್ನು ಹಿಮಾಲಯದ ದಡದಲ್ಲಿ ಗಣಿಗಾರಿಕೆ ಮೂಲಕ ಹೊರತೆಗೆಯಲಾಗುತ್ತದೆ.. ಈ ಉಪ್ಪನ್ನು ಶುದ್ಧ ಮತ್ತು ಅತ್ಯುತ್ತಮವೆಂದು ಪರಿಗಣಿಸಲಾಗುತ್ತದೆ. ಇದು ನಮ್ಮ ದೇಹಕ್ಕೆ ತುಂಬಾ ಉಪಯುಕ್ತವೆಂದು ಪರಿಗಣಿಸಲಾಗಿದೆ. ಏಕೆಂದರೆ ಇದು 84 ಅಗತ್ಯ ಖನಿಜಗಳನ್ನು ಒಳಗೊಂಡಿದೆ. ಇದನ್ನು ನಿಮ್ಮ ಆಹಾರದಲ್ಲಿ ಸೇರಿಸುವುದರಿಂದ ನೀವು ಅನೇಕ ದೈಹಿಕ ಸಮಸ್ಯೆಗಳಿಂದ ರಕ್ಷಿಸಲ್ಪಡುತ್ತೀರಿ. ಕಲ್ಲು ಉಪ್ಪು ಅಥವಾ ಗುಲಾಬಿ ಉಪ್ಪು ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಈ ಉಪ್ಪಿನಿಂದ ಮಾಡಿದ ಆಹಾರವು ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ನಂಬಲಾಗಿದೆ.