ಆರೋಪಿಯನ್ನು ಬಂಧಿಸಲು ಹೋದ ರಾಜ್ಯದ ಪೊಲೀಸರೇ ಅರೆಸ್ಟ್..!
ಬೆಂಗಳೂರು; ವಂಚನೆ ಆರೋಪಿಯನ್ನು ಬಂಧಿಸಲು ಕೇರಳದ ಕೊಚ್ಚಿಗೆ ಹೋಗಿದ್ದ ಕರ್ನಾಟಕದ ಪೊಲೀಸರೇ ಅರೆಸ್ಟ್ ಆಗಿದ್ದಾರೆ. ಬೆಂಗಳೂರಿನ ವೈಟ್‌ಫೀಲ್ಡ್ ಸಿಇಎನ್ ಠಾಣೆ ಇನ್ಸ್‌ಪೆಕ್ಟರ್ ಶಿವಪ್ರಕಾಶ್, ಶಿವಾನಿ, ವಿಜಯ್‌ಕುಮಾರ್ ಹಾಗೂ ಸಂದೇಶ ಅವರನ್ನು ಕೊಚ್ಚಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಚಂದಕ್ ಶ್ರೀಕಾಂತ್ ಎಂಬ ಸಾಫ್ಟ್‌ವೇರ್ ಎಂಜಿನಿಯರ್ ಉದ್ಯೋಗ ಕೊಡಿಸುವುದಾಗಿ ಹೇಳಿ ನನಗೆ ಮೋಸ ಮಾಡಿದ್ದಾರೆ. ಆನ್‌ಲೈನ್ ಮೂಲಕ ಸುಮಾರು 26 ಲಕ್ಷ ರೂಪಾಯಿ ಪಡೆದುಕೊಂಡು ಮೋಸ ಮಾಡಿದ್ದಾರೆ ಎಂದು ವೈಟ್‌ಫೀಲ್ಡ್ ಸಿಇಎನ್ ಠಾಣೆಗೆ ದೂರು ಕೊಟ್ಟಿದ್ದರು. ಅದರಂತೆ ತನಿಖೆ ಶುರು ಮಾಡಿದ ಪೊಲೀಸರು, ಆರೋಪಿಗಳ ಜಾಡು ಹಿಡಿದಿದ್ದರು. ಅದರಂತೆ ಮಡಿಕೇರಿ ಐಸಾಕ್ ಎಂಬಾತ ಬಗ್ಗೆ ಸುಳಿವು ಸಿಕ್ಕಿತ್ತು. ಐಸಾಕ್ ಅಕೌಂಟ್‌ನಲ್ಲಿ 2 ಕೋಟಿ ರೂಪಾಯಿ ಪತ್ತೆಯಾಗಿತ್ತು. ನಂತರ ಇದರ ಜಾಡು ಹಿಡಿದು ಹೋದಾಗ ಕೊಚ್ಚಿಯ ನೌಶಾದ್ ಎಂಬಾತ ಅನ್‌ಲೈನ್ ಫ್ರಾಡ್ ಮಾಡಿರುವುದು ಗೊತ್ತಾಗಿದೆ.
ಹೀಗಾಗಿ ಕೊಚ್ಚಿಯಲ್ಲಿದ್ದ ನೌಶಾದ್‌ನನ್ನು ಬಂಧಿಸಲು ಹೋಗಿದ್ದ ರಾಜ್ಯದ ಪೊಲೀಸರು ಬಂಧಿಸದೇ ಬಿಡಲು ಹತ್ತು ಲಕ್ಷ ರೂಪಾಯಿ ಕೇಳಿದ್ದರಂತೆ. ಮುಂಗಡವಾಗಿ ಸುಮಾರು ನಾಲ್ಕು ಲಕ್ಷ ರೂಪಾಯಿ ಪಡೆಯುವಾಗ ಕಲ್ಲಂಚೇರಿ ಪೊಲೀಸರು, ರಾಜ್ಯ ಪೊಲೀಸರನ್ನು ಹಿಡಿದಿದ್ದಾರೆ. ಈ ಬಗ್ಗೆ ಎಫ್‌ಐಆರ್ ಕೂಡಾ ದಾಖಲಾಗಿದೆ.