CrimeDistricts

ನವಜೋಡಿ ದರ್ಗಾಕ್ಕೆ ಹೋಗುವಾಗ ಡ್ರೈವರ್‌ ಜೊತೆ ಪ್ರೇಮಾಂಕುರ; ನಂತರ ಆಗಿದ್ದು ರಕ್ತದೋಕುಳಿ!

ಬೆಳಗಾವಿ; ಆಕೆಗೆ ಇನ್ನೂ ನಾಲ್ಕು ತಿಂಗಳ ಹಿಂದಷ್ಟೇ ವಿವಾಹವಾಗಿತ್ತು. ವಿವಾಹವಾದ ಹೊಸದರಲ್ಲಿ ನವಜೋಡಿ ಬಾಡಿಗೆ ಕಾರು ಮಾಡಿಕೊಂಡು ದರ್ಗಾಕ್ಕೆ ಹೋಗಿತ್ತು. ಈ ವೇಳೆ ನವವಧುವಿಗೆ ಕಾರಿನ ಚಾಲಕನ ಜೊತೆ ಪ್ರೇಮಾಂಕುರವಾಗಿದೆ. ಇದಾದ ಒಂದೇ ತಿಂಗಳಲ್ಲಿ ಗಂಡನಿಗೆ ಕೈಕೊಟ್ಟ ವಧು, ಕಾರಿನ  ಚಾಲಕನ ಜೊತೆ ಪರಾರಿಯಾಗಿದ್ದಳು. ಇದ್ರಿಂದ ರೊಚ್ಚಿಗೆದ್ದ ಗಂಡ, ತನ್ನ ಪತ್ನಿ ಹಾಗೂ ಪ್ರಿಯಕರನನ್ನು ಕೊಲೆ ಮಾಡಿದ್ದಾನೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೊಕಟನೂರ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ.

ಹೀನಾ ಮೆಹಬೂಬ್ (19) ಹಾಗೂ ಕೊಕಟನೂರ ಗ್ರಾಮದ ತೌಫಿಕ್ ಶೌಕತ್ (24) ನಾಲ್ಕು ತಿಂಗಳ ಹಿಂದೆ ಮದುವೆಯಾಗಿದ್ದರು. ಇವರು ದರ್ಗಾಕ್ಕೆ ಹೋಗಿದ್ದ ಸಂದರ್ಭದಲ್ಲಿ ಬಾಡಿಗೆ ಕಾರಿನ ಚಾಲಕ ಯಾಸಿನ್​ ಅದಮ್ ​(21) ಜೊತೆ ಹೀನಾ ಮೆಹಬೂಬ್ ಗೆ ಪ್ರೇಮಾಂಕುರವಾಗಿ ಓಡಿಹೋಗಿದ್ದರು.

ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಕೊಕಟನೂರ ಗ್ರಾಮದ ತೋಟದ ಮನೆಯಲ್ಲಿ ಯಾಸಿನ್, ಹೀನಾ ಜೋಡಿ ವಾಸವಿತ್ತು. ಈ ವಿಷಯ ತಿಳಿದ ತೌಫಿಕ್‌ ಮಂಗಳವಾರ ಸಂಜೆ ದಾಳಿ ನಡೆಸಿದ್ದಾನೆ. ಲಾಂಗ್​​ನಿಂದ ಹಲ್ಲೆ ನಡೆಸಿ ಪತ್ನಿ ಹೀನಾಳನ್ನು ಹತ್ಯೆ ಮಾಡಿ, ನಂತರ ಆಕೆಯ ಪ್ರಿಯಕರ ಯಾಸಿನ್​ನನ್ನೂ ಕೊಲೆ ಮಾಡಿದ್ದಾನೆ.  ಜಗಳ ಬಿಡಿಸಲು ಬಂದ ಅತ್ತೆ, ಮಾವನ ಮೇಲೂ ತೌಫಿಕ್ ಲಾಂಗ್​ನಿಂದ ಹಲ್ಲೆ ಮಾಡಿದ್ದಾನೆ.

Share Post