BengaluruCrime

ಹಾಸ್ಟೆಲ್‌ನಲ್ಲಿ ಕತ್ತು ಕುಯ್ದ ಸ್ಥಿತಿಯಲ್ಲಿ ಎಂಜಿನಿಯರಿಂಗ್‌ ವಿದ್ಯಾರ್ಥಿ ದೇಹ ಪತ್ತೆ

ಬೆಂಗಳೂರು; ಖಾಸಗಿ ಕಾಲೇಜ್ ಒಂದರ ಇಂಜಿನಿಯರಿಂಗ್ ವಿದ್ಯಾರ್ಥಿ ಯೊಬ್ಬನ ಮೃತದೇಹ ಕತ್ತುಕುಯ್ದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಬನ್ನೇರುಘಟ್ಟ ಸಮೀಪದ ಖಾಸಗಿ ಕಾಲೇಜಿನ ಹಾಸ್ಟೆಲ್‌ನ ಶೌಚಾಲಯದಲ್ಲಿ ವಿದ್ಯಾರ್ಥಿಯ ದೇಹ ಪತ್ತೆಯಾಗಿದೆ.

ಖಾಸಗಿ ಕಾಲೇಜಿನ ವಿದ್ಯಾರ್ಥಿ ನಿತಿನ್ (19) ಸಾವನ್ನಪ್ಪಿರುವಾತ. ಕೇರಳ ಮೂಲದ ವಿದ್ಯಾರ್ಥಿ ನಿತಿನ್ ಡಿ.1ಕ್ಕೆ ಎಂಜಿನಿಯರಿಂಗ್‌ ಕಾಲೇಜಿಗೆ ದಾಖಲಾಗಿದ್ದ. ಪ್ರಥಮ ವರ್ಷದ ಇಂಜಿನಿಯರಿಂಗ್ ಪದವಿಗೆ ಅಡ್ಮಿಷನ್ ಮಾಡಿಸಿದ್ದ ನಿತಿನ್ ಚಾಕುವಿನಿಂದ ತಾನೇ ಕುಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದು ಅಂತ ಶಂಕಿಸಲಾಗಿದೆ.

Share Post