ನಿಂತಲ್ಲೇ ಅಲ್ಲಾಡುತ್ತಿದ್ದ ಕಾರು!; ಉಡುಪಿಯಲ್ಲಿ ಇದೆಂಥಾ ಅನಾಚಾರ..?
ಉಡುಪಿ; ಕಾರೊಂದು ರಸ್ತೆ ಬದಿಯಲ್ಲಿ ನಿಂತಿತ್ತು.. ಆದ್ರೆ ಅದು ಪದೇ ಪದೇ ಅಲ್ಲಾಡುತ್ತಿತ್ತು.. ನಿಂತಿರೋ ಕಾರು ಯಾಕೆ ಅಲ್ಲಾಡುತ್ತಿದೆ ಎಂದು ನೋಡುಗರಿಗೆ ಕುತೂಹಲ ಉಂಟಾಗಿದೆ.. ನಿಧಾನಕ್ಕೆ ಸ್ಥಳಕ್ಕೆ ಹೋಗಿ ನೋಡಿದರೆ ಅವರು ಅಂದುಕೊಂಡಿದ್ದೇ ಅಲ್ಲ ನಡೆಯುತ್ತಿತ್ತು.. ಕಾರನ್ನು ರಸ್ತೆ ಬದಿ ನಿಲ್ಲಿಸಿ, ಕಾರಿನಲ್ಲೇ ಲೈಂಗಿಕ ಕ್ರಿಯೆ ನಡೆಸಲಾಗುತ್ತಿತ್ತು.. ಲಜ್ಜೆಗೆಟ್ಟವರ ಈ ಕೆಲಸ ನೋಡಿ ಜನರು ಉಗಿದು ಉಪ್ಪಿನಕಾಯಿ ಹಾಕಿದ್ದಾರೆ..
ಇದನ್ನೂ ಓದಿ; ಟಿಪ್ಪರ್ ಲಾರಿ ಡಿಕ್ಕಿ; ಗರ್ಭಿಣಿ ಹೊಟ್ಟೆಯಿಂದ ಹೊರಬಂದ ಮಗು!
ಉಡುಪಿಯ ನಗರಸಭೆಯ ಸಮೀಪದ ರಸ್ತೆಯಲ್ಲಿ ಅದೂ ಕೂಡಾ ಹಾಡಹಗಲೇ ಈ ಘಟನೆ ನಡೆದಿದೆ.. ನಗರಸಭೆ ಕಚೇರಿಯ ರಸ್ತೆಯಲ್ಲಿ ಜನರು ಹೆಚ್ಚಾಗಿ ಓಡಾಡುತ್ತಿದ್ದಾರೆ.. ಇಂತಹ ಜನ ಸಂಚಾರ ಹೆಚ್ಚಿರುವ ರಸ್ತೆಯಲ್ಲೇ ಇಂತಹ ಅನಾಚಾರ ನಡೆಯುತ್ತಿತ್ತು.. ಕಾರಿನ ಕಿಟಕಿಗಳಿಗೆ ಪರದೆ ರೀತಿಯ ಬಟ್ಟೆಯನ್ನು ಹೊದಿಸಲಾಗಿತ್ತು.. ಹೀಗಾಗಿ ಜನರು ಇಣುಕು ನೋಡಿದಾಗ ಮೊದಲಿಗೆ ಏನೂ ಗೊತ್ತಾಗಲಿಲ್ಲ.. ಅನಂತರ ಬಾಗಿಲು ಬಡಿದಿದ್ದಾರೆ. ಆಗಲೂ ಅದು ಅಲ್ಲಾಡುವುದು ನಿಂತಿಲ್ಲ. ಇದರಿಂದಾಗಿ ಜನರೆಲ್ಲಾ ಸೇರಿ ಬಾಗಿಲನ್ನು ಜೋರಾಗಿ ಎಳೆದಾಗ ಅದು ತೆರೆದುಕೊಂಡಿದೆ.. ಆಗ ಜೋಡಿ ನೋಡಬಾರದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ..
ಇದನ್ನೂ ಓದಿ; ಪೋಸ್ಟಾಫೀಸ್ ಆರ್‌ಡಿ; ತಿಂಗಳಿಗೆ 5 ಸಾವಿರ ಹೂಡಿಕೆ, ಕೈಗೆ ಬರೋದು 8 ಲಕ್ಷ ರೂಪಾಯಿ!
ಜೋಡಿ ಕೃತ್ಯದಿಂದ ಆಕ್ರೋಶಗೊಂಡ ಜನ ಮಂಗಳಾರತಿ ಮಾಡಿದ್ದಾರೆ.. ಅನಂತರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.. ಪೊಲೀಸರು ಬಂದು ಅವರನ್ನು ಠಾಣೆಗೆ ಕರೆದೊಯ್ದಿದ್ದಾರೆ.. ನಗರದ ಮಧ್ಯದಲ್ಲೇ ಹಾಡಹಗಲೇ ಹೀಗೆ ಅನೈತಿಕ ಚಟುವಟಿಕೆಗಳು ನಡೆಯುತ್ತಿರುವುದಕ್ಕೆ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ..
ಇದನ್ನೂ ಓದಿ; ದಸರಾ ಬಳಿಕ ಸಂಪುಟ ಸರ್ಜರಿಯಾಗುತ್ತಾ..?; ವೇಣುಗೋಪಾಲ್, ಸುರ್ಜೇವಾಲಾ ಗರಂ ಆಗಿದ್ದೇಕೆ..?