ಕುಡಿದ ಅಮಲಲ್ಲಿ ವಿಷ ಕುಡಿದ; ಮಗುವನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ಪತ್ನಿ
ಬೆಳಗಾವಿ; ಕುಡಿದ ಅಮಲಿನಲ್ಲಿದ್ದ ಗಂಡ, ಪತ್ನಿಯೊಂದಿಗೆ ಜಗಳವಾಡಿದ್ದಾನೆ. ನಂತರ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೆದರಿಸಿ ವಿಷ ಕುಡಿದಿದ್ದಾನೆ. ಇದ್ರಿಂದ ನೊಂದ ಪತ್ನಿ ತನ್ನ ಒಂದೂವರೆ ವರ್ಷದ ಮಗುವನ್ನು ಸಾಯಿಸಿ ತಾನೂ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಬೆಳಗಾವಿ ತಾಲೂಕಿನ ಹೊಸ ವಂಟಮೂರಿ ಗ್ರಾಮದಲ್ಲಿ ಈ ದಾರುಣ ಘಟನೆ ನಡೆದಿದೆ.
ಹೊಳೆಪ್ಪ ಮಾರುತಿ ಮಸ್ತಿ (25) ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಾತ. ಪತ್ನಿ ವಾಸಂತಿ (22) ಹಾಗೂ ಒಂದೂವರೆ ವರ್ಷದ ಮಗು ಕೂಡಾ ಸಾವನ್ನಪ್ಪಿದ್ದಾರೆ. ವಾಸಂತಿ ಗಂಡ ಸಾವನ್ನಪ್ಪಿದ್ದನ್ನು ಕಂಡು ಮನನೊಂದು ತನ್ನ ಒಂದೂವರೆ ವರ್ಷದ ಮಗುವನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ. ನಂತರ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.