National

ತಿರುಮಲ ದೇವಸ್ಥಾನಕ್ಕೆ 10 ಎಲೆಕ್ಟ್ರಿಕ್‌ ಬಸ್‌ಗಳ ಕೊಡುಗೆ

ತಿರುಪತಿ; ಮೇಘಾ ಇಂಜಿನಿಯರಿಂಗ್‌ ಇನ್‌ಫ್ರಾಸ್ಟ್ರಕ್ಚರ್‌ ಕಂಪನಿ ಟಿಟಿಡಿಗೆ ಹತ್ತು ಎಲೆಕ್ಟ್ರಿಕ್‌ ಬಸ್‌ಗಳನ್ನು ಕೊಡುಗೆಯಾಗಿ ನೀಡಿದೆ. ತಿರುಮಲ ಬೆಟ್ಟದ ಮೇಲೆ ಪರಿಸರ ಸಂರಕ್ಷಣೆಗಾಗಿ ಟಿಟಿಡಿ ಕ್ರಮ ಕೈಗೊಂಡಿದೆ. ಬೆಟ್ಟದ ಮೆಲೆ ದಿನವೂ ಸಂಚಾರ ಮಾಡುವ ಟ್ಯಾಕ್ಸಿಗಳನ್ನು ಎಲೆಕ್ಟ್ರಿಕ್‌ಗೆ ಬದಲಾಗಿಸಲು ಟಿಟಿಡಿ ಯೋಜನೆ ಹಾಕಿಕೊಂಡಿದೆ. ಟಿಟಿಡಿಯ ಈ ಯೋಜನೆಗೆ ಬೆನ್ನುಲುಬಾಗಿ ನಿಂತಿರುವ ಮೇಘಾ ಇಂಜಿನಿಯರಿಂಗ್‌ ಇನ್‌ಫ್ರಾಸ್ಟ್ರಕ್ಚರ್‌ ಕಂಪನಿ ಹತ್ತು ಎಲೆಕ್ಟ್ರಿಕ್‌ ಬಸ್‌ಗಳನ್ನು ಕೊಡುಗೆಯಾಗಿ ನೀಡಿದೆ.

ತಿರುಮಲ ಬೆಟ್ಟದಲ್ಲಿ ಭಕ್ತರನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ಕೊಂಡೊಯ್ಯಲು ಈ ಬಸ್‌ಗಳಲ್ಲಿ ಉಚಿತ ವ್ಯವಸ್ಥೆ ಮಾಡಲಾಗುತ್ತಿದೆ. ಇನ್ನು ಉಳಿದ ಬಸ್‌ಗಳನ್ನು ಕೂಡಾ ಎಲೆಕ್ಟ್ರಿಕ್‌ಗೆ ಬದಲಾಯಿಸಲು ಚಿಂತನೆ ನಡೆಸಲಾಗುತ್ತಿದೆ ಎಂದು ಟಿಟಿಡಿ ಆಡಳಿತ ಮಂಡಳಿ ತಿಳಿಸಿದೆ.

Share Post