ಮನೆಗಳ್ಳತನಕ್ಕೆ ಬಂದವನು ಆತ್ಮಹತ್ಯೆ ಮಾಡಿಕೊಂಡ..!
ಬೆಂಗಳೂರು; ಕಳ್ಳತನಕ್ಕೆ ಬಂದವನು ಬಂದ ಕೆಲಸ ಮುಗಿಸಿಕೊಂಡು ಹೋಗುತ್ತಾನೆ.. ಆದ್ರೆ ಇಲ್ಲೊಬ್ಬ ಕಳ್ಳ ಕಳ್ಳತನಕ್ಕೆಂದು ಬಂದು ದಿನವಿಡೀ ಆ ಮನೆಯಲ್ಲೇ ಇದ್ದು, ಕೊನೆಗೇ ಅಲ್ಲೇ ನೇಣಿಗೆ ಶರಣಾಗಿದ್ದಾನೆ. ಈ ಘಟನೆ ನಡೆದಿರೋದು ಬೆಂಗಳೂರಿನ ಇಂದಿರಾನಗರದಲ್ಲಿ.
ಇಂದಿರಾನಗರದ ಟೆಕ್ಕಿ ಫ್ಯಾಮಿಲಿ ಯೂರೋಪ್ ಪ್ರವಾಸ ಹೋಗಿತ್ತು. ಮನೆಗೆ ಬೀಗ ಹಾಕಿರುವುದನ್ನು ಗುರುತಿಸಿದ್ದ ದಿಲೀಪ್ ಬಹದ್ದೂರ್ ಎಂಬಾತ ಮನೆಗೆ ನುಗ್ಗಿದ್ದಾನೆ. ಬೆಳಗಿನ ಜಾವ ಮನೆಗೆ ನುಗ್ಗಿದವನು ಸಂಜೆಯವರೆಗೂ ಅಲ್ಲೇ ಇದ್ದಾನೆ. ಅಲ್ಲೇ ಸ್ನಾನ ಕೂಡಾ ಮಾಡಿದ್ದಾನೆ. ಮನೆಯಲ್ಲಿ ಎಲ್ಲಾ ಕಡೆ ಹುಡುಕಾಟ ಕೂಡಾ ನಡೆಸಿದ್ದಾನೆ. ನಂತ್ರ ಏನಾಯ್ತೋ ಏನು, ದೇವರ ಕೋಣೆಯ ಮುಂದಿನ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮನೆಯವರು ಯೋರೋಪ್ ಟ್ರಿಪ್ ಮುಗಿಸಿ ಸಂಜೆ ವಾಪಸ್ ಬಂದಿದ್ದು, ಮನೆ ಬಾಗಿಲು ತೆಗೆದಾಗ ಕಳ್ಳ ನೇಣು ಹಾಕಿಕೊ೦ಡಿರುವುದು ಪತ್ತೆಯಾಗಿದೆ. ಆರೋಪಿ ದಿಲೀಪ್ ಬಹದ್ದೂರ್ 2006ರಲ್ಲಿ ಒಮ್ಮೆ ಕಳ್ಳತನ ಮಾಡಿ ಸಿಕ್ಕಿಬಿದ್ದಿದ್ದ.