CrimeNational

ಸಾಫ್ಟ್‌ವೇರ್‌ ಎಂಜಿನಿಯರ್‌ ಮೇಲೆ ಸಾಮೂಹಿಕ ಅತ್ಯಾಚಾರ

ಜಾರ್ಖಂಡ್; ಪ್ರಿಯಕರನೊಂದಿಗೆ ಬೈಕ್‌ ಮೇಲೆ ಮೇಲೆ ಹೋಗುತ್ತಿದ್ದಾಗ ಅಡ್ಡಗಟ್ಟಿದ ದುಷ್ಕರ್ಮಿಗಳು 26 ವರ್ಷದ ಸಾಫ್ಟ್‌ಮೇರ್‌ ಎಂಜಿನಿಯರ್‌ಳನ್ನು ಹೊತ್ತೊಯ್ದು ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಜಾರ್ಖಂಡ್‌ನ ಸಿಂಗ್‌ಭೂಮ್‌ ಜಿಲ್ಲೆಯಲ್ಲಿ ಹತ್ತು ಕಾಮುಕರು ಈ ಕೃತ್ಯ ಎಸಗಿದ್ದಾರೆ ಎಂದು ತಿಳಿದುಬಂದಿದೆ.

ಜಾರ್ಖಂಡ್‌ನಲ್ಲಿ ವಾಸವಾಗಿರುವ ಯುವತಿ ವರ್ಕ್‌ಫ್ರಂ ಹೋಮ್‌ ಮಾಡುತ್ತಿದ್ದಳು. ಮೊನ್ನೆ ಸಂಜೆ ಪ್ರಿಯಕರನೊಂದಿಗೆ ಬೈಕ್‌ನಲ್ಲಿ ಹೋಗುತ್ತಿದ್ದಳು. ಈ ವೇಳೆ ಅಪರಿಚಿತರು ಅಡ್ಡ ಹಾಕಿ ಆಕೆಯನ್ನು ಕಿಡ್ನ್ಯಾಪ್‌ ಮಾಡಿದ್ದಾರೆ. ಅನಂತರ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ತಿಳಿದುಬಂದಿದೆ.

Share Post