ವಿದ್ಯುತ್ ತಗುಲಿ ಇಬ್ಬರು ಫೋಟೋಗ್ರಾಫರ್‌ಗಳು ಬಲಿ
ಮಂಡ್ಯ; ದೀಪಾವಳಿ ಹಬ್ಬಕ್ಕೆಂದು ಫೋಟೋ ಸ್ಟುಡಿಯೋ ಸ್ವಚ್ಛ ಮಾಡುತ್ತಿರುವ ವೇಳೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗಿ ಇಬ್ಬರು ಫೋಟೋ ಗ್ರಾಫರ್‌ಗಳು ಸಾವನ್ನಪ್ಪಿರುವ ದಾರುಣ ಘಟನೆ ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಬೆಸಗರಹಳ್ಳಿಯಲ್ಲಿ ನಡೆದಿದೆ.
ಬೆಸಗರಹಳ್ಳಿಯ ಲಕ್ಷ್ಮೀ ಸ್ಟುಡಿಯೋದಲ್ಲಿ ಈ ದುರ್ಘಟನೆ ನಡೆದಿದೆ. ಸೋಮವಾರ ಹಬ್ಬವಿದ್ದುದರಿಂದ ಬೆಳಗ್ಗೆ ಫೋಟೋಗ್ರಾಫರ್‌ಗಳಾದ ವಿವೇಕ್ ಮತ್ತು ಮಧುಸೂದನ್ ಸ್ಟುಡಿಯೋವನ್ನು ಸ್ವಚ್ಛಗೊಳಿಸುತ್ತಿದ್ದರು. ಈ ವೇಳೆ ಈ ದುರಂತ ಸಂಭವಿಸಿದೆ. ಇಬ್ಬರು ಫೋಟೋಗ್ರಾಫರ್‌ಗಳ ದುರ್ಮರಣಕ್ಕೆ ಮಂಡ್ಯ ಜಿಲ್ಲೆಯ ಫೋಟೋಗ್ರಾಫರ್‌ಗಳು ಸಂತಾಪ ಸೂಚಿಸಿದ್ದಾರೆ.