National

ಪ್ರಧಾನಿ ಮೋದಿ ಪಂಜಾಬ್‌ ಭೇಟಿ ವೇಳೆ ಭದ್ರತಾ ಲೋಪ

ಚಂಡಿಗಢ: ಪ್ರಧಾನಿ ನರೇಂದ್ರ ಮೋದಿ ಪಂಜಾಬ್‌ ಭೇಟಿ ವೇಳೆ ಭದ್ರತಾ ಉಲ್ಲಂಘನೆಯಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಇಂದು ಬೆಳಗ್ಗೆ ವಿಮಾನದಲ್ಲಿ ಬಟಿಂಡಾಗೆ ಬಂದಿಳಿದರು. ಅಲ್ಲಿಂದ ಅವರು ಹೆಲಿಕಾಪ್ಟರ್‌ನಲ್ಲಿ ಹುಸೇನಿವಾಲಾದಲ್ಲಿರುವ ರಾಷ್ಟ್ರೀಯ ಹುತಾತ್ಮರ ಸ್ಮಾರಕಕ್ಕೆ ಭೇಟಿ ನೀಡಬೇಕಾಗಿತ್ತು. ಆದರೆ ಮಳೆ ಹಾಗೂ ಮಂಜು ಮುಸುಕಿದ ವಾತಾವರಣವಿದ್ದಿದ್ದರಿಂದ ಪ್ರಧಾನಿ ನರೇಂದ್ರ ಮೋದಿ ಅಲ್ಲಿಯೇ 20 ನಿಮಿಷ ಕಾಯಬೇಕಾಗಿ ಬಂದಿದೆ.

ಇನ್ನು ಹವಾಮಾನ ಸುಧಾರಿಸದ ಕಾರಣ, ಪ್ರಧಾನಿಯವರು ರಸ್ತೆ ಮೂಲಕ ರಾಷ್ಟ್ರೀಯ ಸ್ಮಾರಕಕ್ಕೆ ಭೇಟಿ ನೀಡಲು ನಿರ್ಧರಿಸಿದರು. ಆದರೆ ಅಗತ್ಯ ಭದ್ರತಾ ವ್ಯವಸ್ಥೆಗಳನ್ನು ದೃಢೀಕರಿಸಲು ಪೊಲೀಸರಿಗೆ ಸಮಯಾವಕಾಶ ಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ 2 ಗಂಟೆಗೂ ಹೆಚ್ಚು ಕಾಲ ಪ್ರಧಾನಿ ನರೇಂದ್ರ ಮೋದಿ ಕಾದಿದ್ದಾರೆ. ಅನಂತರ ಪೊಲೀಸರು ಅಗತ್ಯ ಭದ್ರತಾ ವ್ಯವಸ್ಥೆಗಳನ್ನು ದೃಢಿಕರಿಸಿದ ನಂತರ 30 ಕಿಲೋ ಮೀಟರ್‌ ದೂರದಲ್ಲಿರುವ ರಾಷ್ಟ್ರೀಯ ಹುತಾತ್ಮರ ಸ್ಮಾರಕಕ್ಕೆ ಪ್ರಯಾಣ ಬೆಳೆಸಿದರು.

ಆದರೆ ಹುಸೇನಿವಾಲಾ ಹುತಾತ್ಮರ ಸ್ಮಾರಕಕ್ಕೆ ಹೋಗುತ್ತಿರುವಾಗ ಫ್ಲೈ ಓವರ್‌ ತಲುಪುತ್ತಿದ್ದಂತೆ, ಪ್ರಧಾನಿ ಮೋದಿಯವರ ಬೆಂಗಾವಲು ಪಡೆಗೆ ಕೆಲವು ಪ್ರತಿಭಟನಾಕಾರರು ಅಡ್ಡಿಯಾಗಿದ್ದಾರೆ. ರಸ್ತೆಗೆ ಅಡ್ಡಲಾಗಿ ನಿಂತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಘೋಷಣೆ ಕೂಗಿದ್ದಾರೆ. ಇದು ಭದ್ರತಾ ಲೋಪದಿಂದಲೇ ಪ್ರಧಾನಿ ನರೇಂದ್ರ ಮೋದಿಗೆ ಅಡ್ಡಿಯಾಗಿದೆ.

Share Post