Crime

ಇಬ್ಬರು ಅಂತಾರಾಜ್ಯ ಶಸ್ತ್ರಾಸ್ತ್ರ ಮಾರಾಟಗಾರರ ಬಂಧನ; 27 ಬಂದೂಕು ವಶ

ದೆಹಲಿ: ಇಬ್ಬರು ಅಂತಾರಾಜ್ಯ ಶಸ್ತ್ರಾಸ್ತ್ರ ಮಾರಾಟಗಾರರನ್ನು ಬಂಧಿಸುವಲ್ಲಿ ದೆಹಲಿ ವಿಶೇಷ ತನಿಖಾ ತಂಡದ ಪೊಲೀಸರು ಯಶಸ್ವಿಯಾಗಿದ್ದಾರೆ. ನೀರಜ್‌  ಬವಾನಿಯಾ ಹಾಗೂ ತಿಲ್ಲು ತಜ್‌ಪುರಿಯಾ ಬಂಧಿತ ಆರೋಪಿಗಳು.

ಶಸ್ತ್ರಾಸ್ತ್ರ ಸಾಗಿಸುತ್ತಿದ್ದಾರೆಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ವಿಶೇಷ ತನಿಖಾ ತಂಡ, ಆರೋಪಿಗಳನ್ನು ಮಾಲು ಸಮೇತ ಬಂಧಿಸುವಲ್ಲಿ ಯಶಸ್ವಿಯಾಗಿದೆ. ಬಂಧಿತರಿಂದ 27 ಬಂದೂಕುಗಳು ಹಾಗೂ ಸಜೀವ ಕಾಟ್ರಿಡ್ಜ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳಾದ ನೀರಜ್‌  ಬವಾನಿಯಾ ಹಾಗೂ ತಿಲ್ಲು ತಜ್‌ಪುರಿಯಾ ಅವರು ಹಲವು ವರ್ಷಗಳಿಂದ ಅಕ್ರಮವಾಗಿ ಶಸ್ತ್ರಾಸ್ತ್ರ ಪೂರೈಕೆ ಮಾಡುತ್ತಿದ್ದರು ಎಂದು ಗೊತ್ತಾಗಿದೆ. ಹಲವು ದಿನಗಳಿಂದ ಇವರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದರು. ಕೊನೆಗೂ ಆರೋಪಿಗಳು ಅಂದರ್‌ ಆಗಿದ್ದಾರೆ.

Share Post