ಶ್ರದ್ಧಾ ಮರ್ಡರ್ ಕೇಸ್; 35 ಅಲ್ಲ, 16 ಪೀಸ್ ಮಾಡಿದ್ದೇನೆ; ತಪ್ಪೊಪ್ಪಿಕೊಂಡ ಅಫ್ತಾಬ್
ದೆಹಲಿ; ಶ್ರದ್ಧಾ ಕೊಲೆ ಮಾಡಿರುವುದು ತಾನೇ ಎಂದು ಕೊನೆಗೂ ಆರೋಪ ಅಫ್ತಾಬ್ ಒಪ್ಪಿಕೊಂಡಿದ್ದಾನೆ. ನಾನು ನಿತ್ಯ ಡ್ರಗ್ಸ್ ಸೇವನೆ ಮಾಡುತ್ತಿದ್ದೆ. ಅದರ ನಶೆಯಲ್ಲಿ ಕೊಲೆ ಮಾಡಿದ್ದೇನೆ. ಶ್ರದ್ಧಾಳನ್ನು 35 ಭಾಗ ಮಾಡಿಲ್ಲ, 16 ಪೀಸ್ ಮಾಡಿದ್ದೆ ಎಂದು ಆತ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ.
ನಾನು ದಿನವೂ ಗಾಂಜಾ ಸೇವಿಸುತ್ತಿದ್ದೆ. ಅದನ್ನು ಶ್ರದ್ಧಾ ವಿರೋಧ ಮಾಡುತ್ತಿದ್ದಳು. ಇದೇ ಕಾರಣಕ್ಕೆ ನಮ್ಮಿಬ್ಬರ ನಡುವೆ ದೊಡ್ಡ ಜಗಳಗಳಾಗುತ್ತಿದ್ದವು. ಮುಂಬೈನಿಂದ ದೆಹಲಿಗೆ ಶಿಫ್ಟ್ ಆದಾಗ ಶ್ರದ್ಧಾ ಮತ್ತು ನನ್ನ ನಡುವೆ ಲಗೇಜ್ ತರೋ ವಿಚಾರಕ್ಕೆ ಜಗಳ ಆಯ್ತು. ಕೊಲೆಯಾದ ದಿನ ದೊಡ್ಡ ಜಗಳ ಆಗಿತ್ತು. ಅದೇ ಆಕ್ರೋಶದಲ್ಲಿ ಕೊಲೆ ಮಾಡಿದ್ದೇನೆ ಎಂದು ಅಫ್ತಾಬ್ ಪೊಲೀಸರ ಮುಂದೆ ಹೇಳಿಕೊಂಡಿದ್ದಾನೆ.
ಶ್ರದ್ಧಾಳನ್ನು ಕೊಲೆ ಮಾಡುವ ಉದ್ದೇಶ ನನಗಿರಲಿಲ್ಲ. ನಶೆಯಲ್ಲಿ ಆ ಕೆಲಸ ಮಾಡಿದ್ದೇನೆ. ಆಕೆಯ ತಲೆಯನ್ನು ನಾನು ಪೀಸ್ ಮಾಡಿಲ್ಲ. ಹಾಗೆಯೇ ಸುಟ್ಟು ಹಾಕಿದ್ದೇನೆ ಎಂದೂ ಆರೋಪ ಅಫ್ತಾಬ್ ಹೇಳಿಕೊಂಡಿದ್ದಾನೆ.