ಶೂಟಿಂಗ್ ವೇಳೆ ರಾಗಿಣಿ ದ್ವಿವೇದಿಗೆ ಗಾಯ
ಬೆಂಗಳೂರು; ತುಪ್ಪದ ಹುಡುಗಿ ಎಂದೇ ಖ್ಯಾತಿ ಹೊಂದಿರುವ ರಾಗಿಣಿ ದ್ವಿವೇದಿ ಅವರಿಗೆ ಚಿತ್ರೀಕರಣದ ವೇಳೆ ಗಾಯವಾಗಿದೆ. ಕಮಾಂಡೋ ಚಿತ್ರದ ಶೂಟಿಂಗ್ ವೇಳೆ ಅವರ ಕೈಗೆ ಗಾಯವಾಗಿದ್ದು, ತಕ್ಷಣ ಚಿಕಿತ್ಸೆ ನೀಡಲಾಗಿದೆ. ಸದ್ಯ ಅವರು ರೆಸ್ಟ್ ಪಡೆದುಕೊಳ್ಳುತ್ತಿದ್ದಾರೆ.
ಚೆನ್ನೈನಲ್ಲಿ ಕಮಾಂಡೋ ಚಿತ್ರದ ಶೂಟಿಂಗ್ ನಡೆಯುತ್ತಿತ್ತು. ಈ ವೇಳೆ ಈ ಅವಘಡ ಸಂಭವಿಸಿದೆ. ಬ್ಯಾಂಡೇಜ್ ಸುತ್ತಿದ ಕೈ ತೋರಿಸಿ ಫೋಟೋವೊಂದರನ್ನು ರಾಗಿಣಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.