ಬೆಂಗಳೂರಿನಲ್ಲಿ ಹೈ ಟೆನ್ಶರ್ ವೈಯರ್ ಗೆ ಮತ್ತೊಂದು ಜೀವ ಬಲಿ..!
ಬೆಂಗಳೂರು; ಹೈ ಟೆನ್ಷನ್ ವೈಯರ್ ತಗುಲಿ ೧೧ ವರ್ಷದ ಅಬುಬಕ್ಕರ್ ಎಂಬ ಬಾಲಕ ಸಾವೀಗಿಡಾಗಿದ್ದಾನೆ.ಆರ್ ಟಿ ನಗರದ ಚಾಮುಂಡಿ ನಗರದ ಚಿಂಗಮ್ ಫ್ಯಾಕ್ಟರಿ ಈ ಬಳಿ ಘಟನೆ ನಡೆದಿದೆ. ಕಳೆದ ಸೋಮವಾರ ಗಾಳಿಪಟ ಹಾರಿಸುವಾಗ ಅವಘಢ ನಡೆದಿದೆ.ಆ ಬಾಲಕನನ್ನ ಹೆಚ್ಚಿನ ಚಿಕಿತ್ಸೆಗೆ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು ಆದರೆ ಚಿಕಿತ್ಸೆ ಫಲಕಾರಿಯಾಗದೇ ಬಾಲಕ ಸಾವನ್ನಪ್ಪಿದ್ದಾನೆ.
ಹೈಟೆನ್ಶನ್ ವೈಯರ್ ಗಿಂತ ಮನೆಗಳು ಎತ್ತರದಲ್ಲಿವೆ. ಮನೆಯ ಮೇಲಿಂದ ಕೈಗೆ ತಾಕುವಂತಿದೆ ಹೈ ಟೆನ್ಶನ್ ವೈಯರ್ ಗಳು. ಈ ಹೆನ್ಶನ್ ವೈಯರ್ ಹಾದು ಹೊಗುವ ಜಾಗದಲ್ಲಿ ಒಂದು ಪಾರ್ಕ್ ಇದೆ. ಇದರಿಂದ ಪಾರ್ಕ್ ಗೆ ಬರೋ ಮಕ್ಕಳಿಗೆ, ವೃದ್ಧರಿಗೂ ಅಪಾಯ. ಘಟನೆ ನಡೆದ ಬಳಿಕವೂ ಸ್ಥಳಕ್ಕೆ ಬೆಸ್ಕಾಂ ಅಧಿಕಾರಿಗಳು ಇದವರೆಗೂ ಬೇಟಿ ನೀಡಿಲ್ಲ. ಬೆಸ್ಕಾಂ ಅಧಿಕಾರಿಗಳ ಮೇಲೆ ದೂರು ದಾಖಲಿಸಿಕೊಳ್ಳಲು ಆರ್ ಟಿ ನಗರ ಪೊಲೀಸರು ಹಿಂದೇಟು ಹಾಕುತಿದ್ದಾರೆ. ಪೊಲೀಸರು ಮಗುವಿನದ್ದೇ ತಪ್ಪು ಎಂದು ದೂರು ದಾಖಲಿಸಿಕೊಳ್ಳದೇ ಪೋಷಕರನ್ನ ಬೈದು ಕಳಿಸಿದ್ದಾರೆಂದು ಆರೋಪ ಮಾಡಿತಿದ್ದಾರೆ.ಇದೇ ಜಾಗದಲ್ಲಿ ಈ ಹಿಂದೆ ನಾಲ್ವರು ಬಾಲಕರು ಹೈ ಟೆನ್ಶನ್ ವೈಯರ್ ಗೆ ಬಲಿಯಾಗಿದ್ದರೆ ಇದು ಐದನೇ ಘಟನೆ ಎಂದು ಹೆಳಲಾಗುತ್ತಿದೆ.