CrimeNational

ಏಳು ವರ್ಷದ ಬಾಲಕಿ ಮೇಲೆ ಅತ್ಯಾಚಾರ; ಪೊದೆಗೆ ಎಸೆದ ದುರುಳ

ಪಾಟ್ನಾ; ಶಾಲಾ ಆವರಣದಲ್ಲಿದ್ದ ಶೌಚಾಲಯದಲ್ಲಿ ಏಳು ವರ್ಷದ ಬಾಲಕಿ ಮೇಲೆ ಕುಡುಕನೊಬ್ಬ ಅತ್ಯಾಚಾರ ಎಸಗಿ ಪೊದೆಗೆ ಬಿಸಾಕಿರುವ ದಾರುಣ ಘಟನೆ ಬಿಹಾರದ ಬೆಗುಸರಾಯ್ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದಿದೆ. ಬಾಲಕಿ ಶಾಲೆಯ ಆವರಣದಲ್ಲಿ ಸ್ವಿಂಗ್‌ ರೈಡ್‌ ಆಟ ಆಡುತ್ತಿದ್ದಳು. ಈ ವೇಳೆ ಬಾಲಕಿಯನ್ನು ಪುಸಲಾಯಿಸಿದ ಚೋಟು ಕುಮಾರ್‌ ಎಂಬಾತ ಬಾಲಕಿಯನ್ನು ಪುಸಲಾಯಿಸಿ ಶೌಚಾಲಯಕ್ಕೆ ಕರೆದೊಯ್ದಿದ್ದಾನೆ. ಈ ವೇಳೆ ಮತ್ತೊಬ್ಬಳು ಬಾಲಕಿ ಅಡ್ಡಿ ಮಾಡಿದ್ದು, ಆಕೆ ಮೇಲೆ ಆರೋಪ ಹಲ್ಲೆ ಮಾಡಿದ್ದಾನೆ.

ಶೌಚಾಲಯದಲ್ಲಿ ಬಾಲಕಿ ಮೇಲೆ ಅತ್ಯಾಚಾರ ಎಸಗಿರುವ ಆರೋಪಿ ನಂತರ ಆಕೆಯನ್ನು ಪೊದೆಗೆ ಎಸೆದಿದ್ದಾನೆ. ತಪ್ಪಿಸಿಕೊಂಡು ಬಂದ ಬಾಲಕಿ ಸ್ಥಳೀಯರ ಮೂಲಕ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ.

Share Post