CrimeDistricts

ಪದೇ ಪದೇ ಕುಸಿದು ಬೀಳುತ್ತಿರುವ ಸರ್ಕಾರಿ ಶಾಲೆ ಮೇಲ್ಛಾವಣಿ:ಆತಂಕದಲ್ಲಿ ವಿದ್ಯಾರ್ಥಿಗಳು

ರಾಯಚೂರು: ಸರ್ಕಾರಿ ಶಾಲೆ ಕಟ್ಟಡಗಳು ಕುಸಿದು ಬೀಳುತ್ತಿರುವ ವಿಷಯ ಪ್ರತಿದಿನ ಸುದ್ದಿಯಾಗುತ್ತಿದೆ. ಆದ್ರೆ ಈ ಬಗ್ಗೆ ಸರ್ಕಾರ ಆಗಲಿ, ಸ್ಥಳೀಯ ಮಟ್ಟದ ಅಧಿಕಾರಿಗಳಾಗಳಿ ತಲೆ ಕೆಡಿಸಿಕೊಳ್ತಿಲ್ಲ. ಏನಾದ್ರೂ ಅಪಾಯ ಆದ ಮೇಲೆಯೇ ಅದನ್ನು ಸರಿಮಾಡಲು ಬರ್ತಾರೆ ಅನ್ನೋದು ಗೊತ್ತಿರೂ ವಿಚಾರ.

ಈಗ ಮತ್ತೊಂದು ಸರ್ಕಾರಿ ಶಾಲೆ ಪರಿಸ್ಥಿತಿ ಕೂಡ ಹಾಗೆ ಆಗಿದೆ. ರಾಯಚೂರಿನ ಜೇಗರಕಲ್‌ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಸುಮಾರು ಐನೂರಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. 2011-12ರಲ್ಲಿ ನಿರ್ಮಾಣವಾಗಿದ್ದ ಈ ಶಾಲೆ. ಈಗಾಗಲೇ ಎರಡು ಬಾರಿ ಕಟ್ಟಡದ ಮೇಲ್ಚಾವಣಿ ಕುಸಿದು ಬಿದ್ದಿದೆ. ಅಂದರೆ ಶಾಲೆ ಕಟ್ಟಿ ಕೇವಲ ಕಳೆದಿರುವುದು ಕೇವಲ ಹತ್ತು ವರ್ಷಗಳು ಮಾತ್ರ. ಹತ್ತೇ ವರ್ಷಕ್ಕೆ ಕಟ್ಟಡ ಮೇಲ್ಛಾವಣಿ ಕುಸಿದು ಬಿದ್ದಿದೆ ಅಂದ್ರೆ ಅದರ ಕಾಮಗಾರಿ ಯಾವ ರೀತಿ ಇರಬಹುದೆಂದು ನೀವೇ ಯೋಚನೆ ಮಾಡಿ.. ವಿದ್ಯಾರ್ಥಿಗಳು, ಶಿಕ್ಷಕರು ಪ್ರತಿದಿನ ಜೀವಭಯದಲ್ಲಿ ಕಾಲಕಳೆಯುವಂತಾಗಿದೆ. ಶುಕ್ರವಾರ ಸಾಲೆ ರಜೆಯಿದ್ದಾಗ ಒಮ್ಮೆ ಕುಸಿದಿದೆ. ಬಿಸಿಯೂಟ ಸೇವಿಸುವ ಸ್ಥಳದಲ್ಲೊಮ್ಮೆ ಕುಸಿದು ಬಿದ್ದಿದೆ.

ಈಗ ಮತ್ತೆ ಕಟ್ಟಡದ ಮೇಲ್ಛಾವಣಿ ಕುಸಿದು ಬೀಳುವ ಹಾಗಿದೆ, ಇದಕ್ಕೆ ಕಳಪೆ ಕಾಮಗಾರಿಯೇ ಕಾರಣ ಅಂತ ಶಿಕ್ಷಕರು ಆರೋಪ ಮಾಡ್ತಿದಾರೆ. ಎರಡು ಸಲ ಬಿದ್ದಾಗಳು ಅದೃಷ್ಟವಶಾತ್‌ ಯಾರಿಗೂ ಏನೂ ಆಗಿಲ್ಲ, ಒಂದು ವೇಳೆ ಮಕ್ಕಳ ಮೇಲೆ ಮೇಲ್ಛಾವಣಿ ಬಿದ್ದರೆ ಏನು ಮಾಡುವುದು?ಯಾರನ್ನು ಕಾರಣಕರ್ತರಾಗಿ ದೂಷಿಸುಚುದು ಎಂದು ಶಿಕ್ಷಕರು ಕಳವಳ ವ್ಯಕ್ತಪಡಿಸಿದ್ದಾರೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಇದಕ್ಕೊಂದು ನಾಂದಿ ಹಾಡುವಂತೆ ಶಿಕ್ಷಕರು ಮನವಿ ಮಾಡಿದ್ದಾರೆ.

Share Post