ಇಂದು ನನ್ನ ಮದುವೆ ಪ್ಲೀಸ್ ಬಿಟ್ಬಿಡಿ:ವರ್ಕ್ ಫ್ರಮ್ ಹೋಂ ಸಂಕಷ್ಟ
ಪಟಾಣ್‌ಕೋಟ್: ಕೊರೊನಾ ಬಂದಿದ್ದೇ ಬಂದಿದ್ದು ಏನೆಲ್ಲಾ ಬದಲಾವಣೆ ಆಗಿದೆ. ಮಳೆ ನಿಂತರೂ ಮಳೆ ಹನಿ ನಿಲ್ಲಲ್ಲ ಅನ್ನೋ ಹಾಗೆ ಈ ವರ್ಕ್ ಫ್ರಮ್ ಹೋ ಮಾತ್ರ ನಿಲ್ತಿಲ್ಲ. ಆಫೀಸ್ ಇದ್ರೆ ಕೆಲಸಗಾರರಿಗೆ ಕ್ಯಾಬ್, ಕಾಫಿ, ಟೀ, ಮೂಲಭೂತ ಸೌಕರ್ಯ ಒದಗಿಸಬೇಕು. ಎರಡು ವರ್ಷಗಳಿಂದ ಮನೆಯಿಂದ ಕೆಲಸ ಮಾಡೋದು ಅಬ್ಯಾಸ ಆಗಿ ಕಚೇರಿಗಳು ಬಾಗಿಲು ತೆರೆಯುವುದನ್ನೇ ಮರೆತುಬಿಟ್ಟಿವೆ ಅನ್ಸತ್ತೆ.
ಯಾವ ಮಟ್ಟಿಗೆ ಬಾಸ್‌ಗಳು ಕಾಟ ಕೊಡ್ತಾರೆ ಅಂದ್ರೆ ಊಟ ಮಾಡೋಕು ಬಿದ್ತಿಲ್ಲ. ಮಧ್ಯರಾತ್ರಿಯಾದ್ರೂ ಕೆಲಸ..ಕೆಲಸ..ಕೆಲಸ…ಇದಕ್ಕಿಂತ ಆಫೀಸೇ ಮೇಲು ಅನನುವ ಸ್ಥಿತಿಗೆ ಬಂದಿದೆ. ಈಗ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಬಹಳ ಸದ್ದು ಮಾಡ್ತಿದೆ. ಪಾಪಾ ಆ ಮದುಮಗಳು ತನ್ನ ಮದುವೆ ದಿನದಂದೂ ಕೂಡ ಮೊಬೈಲ್, ಲ್ಯಾಪ್‌ಟಾಪ್ ಇಟ್ಕೊಂಡು ಕೆಲಸ ಮಾಡ್ತಿದಾಳೆ. ಮದುವೆ ದಿನ ಎಕ್ಸಾಮ್ ಬರೆದಿರೋ ವಿಷಯ ಗೊತ್ತು ಆದರೆ ಮದುವೆ ದಿನ ಕಚೇರಿ ಕೆಲಸ ಮಾಡೋದು ಅಂದ್ರೆ ಏನ್ ಸುಮ್ನೇನಾ? ತಾಳಿ ಕಟ್ಟಿಸಿಕೊಳ್ಳುವ ಬದಲು ಪಾಪ ಹೀಗೆ ರೂಂನಲ್ಲಿ ಕೆಲಸ ಮಾಡ್ತಿದಾಳೆ ಮದುಮಗಳು.
ಕೆಲಸದ ಬಗ್ಗೆ ಮಾತಾಡಿ ಸಾಕಾದ ಮೇಲೆ ಬಾಸ್ ಕರೆ ಮಾಡಿದ್ದಾರೆ. ಕೋಪಗೊಂಡ ಯುವತಿ, ಸಾರ್ ಇವತ್ತು ನನ್ನ ಮದುವೆ ಇವತ್ತಾದ್ರೂ ನನ್ನ ಬಿಟ್ಬಿಡಿ ಪ್ಲೀಸ್ ಎಂದು ಮನವಿ ಮಾಡಿಕೊಂಡಿರುವ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗ್ತಿದೆ.