Politics

ಕಾರ್ಯಕ್ರಮಕ್ಕೆ ಆಹ್ವಾನಿಸಲು ಸಿದ್ದರಾಮಯ್ಯನವರ ಮನೆಗೆ ಹೋಗಿದ್ದೆ : ಜೆಡಿಎಸ್‌ ಶಾಸಕ ಪುಟ್ಟರಾಜು ಸ್ಪಷ್ಟನೆ

ಮಂಡ್ಯ : ಇಂದು ಬೆಳಗ್ಗೆಯಿಂದ ಮೇಲುಕೋಟೆಯ ಜೆಡಿಎಸ್‌ ಶಾಸಕ ಪುಟ್ಟರಾಜು ಅವರ ಫೋಟೋವೊಂದು ವೈರಲ್‌ ಆಗಿತ್ತು. ಸಿದ್ದರಾಮಯ್ಯನವರು ಭೇಟಿ ಮಾಡಲು ಪುಟ್ಟರಾಜು  ಹೋಗಿದ್ದದ್ದು ರಾಜಕೀಯ ಉದ್ದೇಶದಿಂದ ಇರಬೇಕು ಎಂದು ಶಂಕಿಸಲಾಗಿತ್ತು. ಈಗ ಪುಟ್ಟರಾಜು ಅವರೇ ಮಾತನಾಡಿ ಸ್ಪಷ್ಟನೆ ನೀಡಿದ್ದಾರೆ.

ಡಿಂಕಾ ಮಲ್ಲಿಗೆರೆ ಗ್ರಾಮದಲ್ಲಿ ಸಿದ್ದರಾಮೇಶ್ವರ ದೇವಾಲಯ ನಿರ್ಮಾಣ ಮಾಡಿದ್ದಾರೆ ಇದರ ಉದ್ಘಾಟನೆಗೆ ವಿರೋಧ ಪಕ್ಷದ ನಾಯಕರನ್ನು ಕರೆಸುವಂತೆ ಗ್ರಾಮಸ್ಥರು ಬೇಡಿಕೆ ಇಟ್ಟಿದ್ದರು. ಈ ಕುರಿತು ಆಹ್ವಾನಿಸಲು ಹೋಗಿದ್ದೆ ಬೇರೆ ಯಾವ ರಾಜಕೀಯ ಉದ್ದೇಶದಿಂದಲ್ಲ ಎಂದು ಜೆಡಿಎಸ್‌ ಶಾಸಕ ಪುಟ್ಟರಾಜು ಸ್ಪಷ್ಟ ಪಡಿಸಿದ್ದಾರೆ.

ನನಗೆ ಬೆಳಗ್ಗೆ 7ಗಂಟೆಗೆ ಬರುವಂತೆ ಸಮಯ ಕೊಟ್ಟಿದ್ದರು ಆದರೆ ನಾನು ಸಿದ್ದರಾಮಯ್ಯನವರನ್ನು ಭೇಟಿ ಮಾಡಲು ಸಂಜೆ 6.30 ಕ್ಕೆ ಹೋಗಿದ್ದೆ. ಅಲ್ಲಿ ಜಮೀರ್‌, ಎಂ ಬಿ ಪಾಟೀಲ್‌ ಕೂಡ ಇದ್ದರು. ಈ ಸಮಯದಲ್ಲಿ ಯಾರೋ ಫೋಟೋ ತೆಗೆದು ವೈರಲ್‌ ಮಾಡಿದ್ದಾರೆ.

ನಾನು ಜೆಡಿಎಸ್‌ ಅವರು ಕಾಂಗ್ರೆಸ್‌ ಹಾಗಾಗಿ ರಾಜಕೀಯವಾಗಿ ನಮ್ಮ ನಡುವೆ ಮಾತನಾಡಲು ಏನೂ ಇಲ್ಲ ಎಂದು ಶಾಸಕರು ಸ್ಪಷ್ಟನೆ ಕೊಟ್ಟಿದ್ದಾರೆ.

Share Post