BengaluruCrime

ರೌಡಿ ಶೀಟರ್ ಮೇಲೆ ಡೆಡ್ಲಿ ಅಟ್ಯಾಕ್; ಗ್ರೇಟ್ ಎಸ್ಕೇಪ್

ಬೆಂಗಳೂರು; ಸಿಲಿಕಾನ್ ಸಿಟಿ‌ ಬೆಂಗಳೂರಲ್ಲಿ ಕೊಲೆಗಳ ಸಂಖ್ಯೆ ಹೆಚ್ಚಾಗುತ್ತಲೇ ಇವೆ.. ರೌಡಿಗಳು‌ ಬೀದಿಯಲ್ಲೇ‌ ಮಚ್ಚು, ಲಾಂಗು ಝಳಪಿಸಿದ್ದು, ರೌಡಿ ಶೀಡರ್ ಒಬ್ಬರ ಮೇಲೆ ಭೀಕರ ದಾಳಿ ನಡೆದಿದೆ..

 ಜೀವನ್ ಭೀಮಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರೌಡಿಶೀಟರ್ ಜೋಶ್ವಾ ಮೇಲೆ ಅಟ್ಯಾಕ್ ನಡೆದಿದೆ.. ಬೈಯ್ಯಪ್ಪನಹಳ್ಳಿ ರೌಡಿಶೀಟರ್ ಶಿವ ಮತ್ತು ಆತನ‌ ಗ್ಯಾಂಗ್ ಅಟ್ಯಾಕ್ ಮಾಡಿದೆ ಎಂದು ತಿಳಿದುಬಂದಿದೆ.

ರೌಡಿ ಶೀಟರ್ ಜೋಶ್ವಾ ತಿಪ್ಪಸಂದ್ರದದ ಬಳಿ ಹೋಗುತ್ತಿದ್ದ. ಈ ವೇಳೆ ಶಿವ ಮತ್ತು ಆತನ‌‌ ಗ್ಯಾಂಗ್ ಅಟ್ಯಾಕ್ ಮಾಡಿದೆ.. ಹಳೇ ದ್ವೇಷದ ಹಿನ್ನೆಲೆಯಲ್ಲಿ ಈ ದಾಳಿ ಮಾಡಲಾಗಿದೆ ಎಂದು ತಿಳಿದುಬಂದಿದೆ. ಆದ್ರೆ ಜೋಶ್ವಾ ಅದೃಷ್ಟ ನೆಟ್ಟಗಿತ್ತು ಅಂತ ಕಾಣುತ್ತೆ, ಜೋಶ್ವಾ ಯಾರ ಕೈಗೂ ಸಿಗದೆ ತಿಪ್ಪಸಂದ್ರ ಮಾರ್ಕೆಟ್ ಗೆ ನುಗ್ಗಿ ಎಸ್ಕೇಪ್ ಆಗಿದ್ದಾನೆ.

 ಲಾಂಗ್, ಮಚ್ಚು ಹಿಡಿದು ಅಟ್ಯಾಕ್ ಮಾಡುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪೊಲೀಸರು ಈ ದೃಶ್ಯಾವಳಿ ಆಧರಿಸಿ ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

 

Share Post