CrimeNational

ರೀಲ್ಸ್ ಗಾಗಿ ಉಲ್ಟಾ ನೇತಾಡುವ ಹುಚ್ಚು ಸಾಹಸ; ಕೆಳಗೆ ಬಿದ್ದು ಯುವಕ ಸಾವು!

ಲಖನೌ; ರೀಲ್ಸ್ ಮಾಡುವವರ ಹುಚ್ಚಾಟ, ಅದರಿಂದ ಆಗುವ ಅನಾಹುತಗಳು ಹೆಚ್ಚಾಗುತ್ತಿವೆ.. ಕೆಲವರು ರೀಲ್ಸ್ ಮಾಡುವ ಹುಚ್ಚಿನಿಂದ ಪ್ರಾಣವನ್ನು ಲೆಕ್ಕಿಸುತ್ತಿಲ್ಲ.. ಅದೇ ಹುಚ್ಚು ಸಾಹಸ ಮಾಡಲು ಹೋಗಿ ಓರ್ವ ಪ್ರಾಣ ಕಳೆದುಕೊಂಡಿದ್ದಾನೆ.

   ಉತ್ತರ ಪ್ರದೇಶದ ಬಾಂದ್ರಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಯುವಕನೊಬ್ಬ ಸಾಹಸದ ರೀಲ್ಸ್ ಮಾಡಲು ಹೋಗಿದ್ದಾನೆ. ಆತ ಶಾಲೆಯೊಂದರ ಕಟ್ಟಡದಿಂದ ತಲೆಕೆಳಗಾಗಿ ನೇತಾಡುತ್ತಾ ರೀಲ್ಸ್ ಮಾಡಲು ಹೋಗಿದ್ದಾನೆ.. ಈ ವೇಳೆ ಆತನ ಮೇಲೆ ಕಟ್ಟಡದ ಮೇಲಿದ್ದ ಚಪ್ಪಡಿ ಕಲ್ಲು ಉರುಳಿಬಿದ್ದಿದೆ. ಇದರಿಂದ ಆ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

  21 ವರ್ಷದ ಶಿವಂ ಎಂಬಾತನೇ ಸಾವನ್ನಪ್ಪಿದ ಯುವಕನಾಗಿದ್ದಾನೆ. ಇವನು ರೀಲ್ಸ್ ಮಾಡಿ ಹೆಚ್ಚು ಲೈಕ್ಸ್ ಸಂಪಾದಿಸುವುದಕ್ಕಾಗಿ ಸಾಹಸ ಮಾಡಲು ಹೋಗಿದ್ದಾನೆ. ಈ ವೇಳೆ ಚಪ್ಪಡಿ ಕಲ್ಲು ಉರುಳಿದೆ. ಇದರಿಂದ ಆತ ಸ್ಥಳದಲ್ಲೇ ನರಳಿ ನರಳಿ ಸಾವನ್ನಪ್ಪಿದ್ದಾನೆ.

ಯುವಕನ ಸಾವಿನ ಸುದ್ದಿ ತಿಳಿದ ಪೋಷಕರು ಹಾಗೂ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.

 

Share Post