Politics

ಸುಧಾಕರ್ ಬಗ್ಗೆ ಮೋದಿಗೇಕೆ ವಿಶೇಷ ಕಾಳಜಿ..?

ಬೆಂಗಳೂರು; ಚಿಕ್ಕಬಳ್ಳಾಪುರಕ್ಕೆ ಇಂದು ಮೋದಿ ಬರುತ್ತಿದ್ದಾರೆ.. ಬೆಂಗಳೂರಿಗೆ ಚಿಕ್ಕಬಳ್ಳಾಪುರ ತುಂಬಾ ದೂರವೇನಲ್ಲ.. ಅಲ್ಲಿನ ಕಾರ್ಯಕರ್ತರನ್ನು ಬೆಂಗಳೂರಿಗೇ ಕರೆಸಿಕೊಳ್ಳಬಹುದಿತ್ತು.. ಆದ್ರೆ ಪ್ರಧಾನಿ ಮೋದಿಯವರಿಗೆ ಚಿಕ್ಕಬಳ್ಳಾಪುರದ ಬಗ್ಗೆ ಅದರಲ್ಲೂ ಡಾ.ಕೆ.ಸುಧಾಕರ್ ಬಗ್ಗೆ ವಿಶೇಷ ಕಾಳಜಿ ಇದೆಯಂತೆ. ಹೀಗಾಗಿ ಮೋದಿಯವರು ಚಿಕ್ಕಬಳ್ಳಾಪುರಕ್ಕೆ ಬರುತ್ತಿದ್ದಾರೆ..

ಒಕ್ಕಲಿಗ ನಾಯಕನ ಬೆಳೆಸಲು ತಂತ್ರಗಾರಿಕೆ;

  ಬಿಜೆಪಿಗೆ ಲಿಂಗಾಯತ ಮತಗಳೇ ವೋಟ್ ಬ್ಯಾಂಕ್.. ಒಕ್ಕಲಿಗ ಮತಗಳೂ ಸಿಕ್ಕಿದರೆ ರಾಜ್ಯದಲ್ಲಿ ಬಿಜೆಪಿ ಮತ್ತಷ್ಟು ಸ್ಟ್ರಾಂಗ್ ಆಗಲಿದೆ.. ಆದ್ರೆ ಒಕ್ಕಲಿಗ ಮತಗಳನ್ನು ದೊಡ್ಡ ಮಟ್ಟದಲ್ಲಿ ಸೆಳೆಯುವುದಕ್ಕಾಗಿ ಒಬ್ಬ ಸಮರ್ಥ ಒಕ್ಕಲಿಗ ನಾಯಕ ಬಿಜೆಪಿಗೆ ಬೇಕು.. ಸುಧಾಕರ್ ವರ್ಚಸ್ಸು ಹಾಗೂ ಅವರ ರಾಜಕೀಯ ತಂತ್ರಗಾರಿಕೆ ಅರಿತಿರುವ ಕೇಂದ್ರ ಬಿಜೆಪಿ ನಾಯಕರು, ಸುಧಾಕರ್ ಅವರನ್ನು ದೊಡ್ಡ ಮಟ್ಟದಲ್ಲಿ ಬೆಳೆಸಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ. ಈ ಕಾರಣಕ್ಕಾಗಿಯೇ ಮೋದಿಯವರು ವಿಶೇಷ ಕಾಳಜಿ ವಹಿಸಿ ಸುಧಾಕರ್ ಅವರ ಪರವಾಗಿ ಪ್ರಚಾರ ಮಾಡಲು ಬರುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಚಿಕ್ಕಬಳ್ಳಾಪುರದಲ್ಲಿ ಗೆಲ್ತಾರಾ ಸುಧಾಕರ್..?

   ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದ ಸುಧಾಕರ್ ಈ ಬಾರಿ ಸಿಂಪಥಿ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಜೊತೆಗೆ ಅವರು ಮಂತ್ರಿಯಾಗಿದ್ದಾಗ ಮಾಡಿದ ಅಭಿವೃದ್ಧಿ ಕೆಲಸಗಳು ಅವರ ಕೈಹಿಡಿಯುತ್ತಿವೆ.. ಜನರು ಸುಧಾಕರ್ ಮಾಡಿರುವ ಕೆಲಸಗಳ ಬಗ್ಗೆ ಮಾತನಾಡುತ್ತಿದ್ದಾರೆ. ಇದು ಕೊಂಚ ಸುಧಾಕರ್ ಗೆ ಅನುಕೂಲ ಮಾಡಿಕೊಡುತ್ತಿದೆ. ಇನ್ನು ಮೋದಿ ಆಗಮನ ಕೂಡಾ ಸುಧಾಕರ್ ಗೆ ದೊಡ್ಡ ಬಲ ತಂದುಕೊಡಲಿದೆ ಎಂದು ಹೇಳಲಾಗುತ್ತಿದೆ.

Share Post