BengaluruCrime

ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖಾಧಿಕಾರಿಯೇ ಬದಲಾವಣೆ; ಶುರುವಾಯ್ತು ಅನುಮಾನ..!

ಬೆಂಗಳೂರು; ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ಬಗ್ಗೆ ಕೊಂಚ ಅನುಮಾನಗಳು ಮೂಡಲು ಶುರುವಾಗಿದೆ.. ನಿನ್ನೆತನಕ ತನಿಖೆ ಚೆನ್ನಾಗಿಯೇ ನಡೆಯುತ್ತಿತ್ತು.. ಆದ್ರೆ ಇದೀಗ ಈ ಪ್ರಕರಣದ ತನಿಖೆ ನಡೆಸುತ್ತಿದ್ದ ತನಿಖಾಧಿಕಾರಿಯನ್ನೇ ಬದಲಾಯಿಸಲಾಗಿದೆ.. ಇದರಿಂದಾಗಿ ಹಲವು ಅನುಮಾನಗಳು ಶುರುವಾಗಿವೆ..

ಕಾಮಾಕ್ಷಿಪಾಳ್ಯದ ಇನ್​​ಸ್ಪೆಕ್ಟರ್​ ಗಿರೀಶ್ ನಾಯ್ಕ್ ಅವರು ಪ್ರಕರಣದ ತನಿಖಾಧಿಕಾರಿಯಾಗಿದ್ದು, ಸ್ಥಳ ಮಹಜರು, ವಿಚಾರಣೆ ಕರಾರುವಾಕ್ಕಾಗಿ ನಡೆಸುತ್ತಿದ್ದರು.. ಆದ್ರೆ ಅವರನ್ನು ಬೇರೆಡೆ ಕಳುಹಿಸಿ, ಇಂದಿನಿಂದ ಎಸಿಪಿ ಚಂದನ್ ತನಿಖಾಧಿಕಾರಿಯಾಗಿ ನೇಮಕ ಮಾಡಲಾಗಿದೆ.. ಪ್ರಕರಣದ ಪ್ರಾರಂಭದಿಂದ ತನಿಖೆ ಮಾಡುತ್ತಿದ್ದ ಗಿರೀಶ್‌ ನಾಯ್ಕ್‌ ಅವರನ್ನು ದಿಢೀರ್‌ ಬದಲಾವಣೆ ಮಾಡಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ..

ಇನ್ಮುಂದೆ ಎಸಿಪಿ ಚಂದನ್​ ಅವರ ಸೂಚನೆಯಲ್ಲೇ ರೇಣುಕಾಸ್ವಾಮಿ ಕೊಲೆ ಕೇಸ್  ನಡೆಯಲಿದೆ ಎಂದು ತಿಳಿದುಬಂದಿದೆ.. ಇನ್ನೊಂದೆಡೆ ಆರೋಪಿ ದರ್ಶನ್‌ ಸೇರಿ 13 ಮಂದಿ ಆರೋಪಿಗಳ ವಿಚಾರಣೆ ನಡೆಸುತ್ತಿರುವ ಅನ್ನಪೂರ್ಣೇಶ್ವರಿ ನಗರ ಪೊಲೀಸ್‌ ಠಾಣೆಗೆ ಶಾಮಿಯಾನಾದಿಂದ ಮುಚ್ಚಿದ್ದಾರೆ.. ಇದೂ ಕೂಡಾ ಹಲವು ಅನುಮಾನಗಳನ್ನು ಹುಟ್ಟಿಸಿದೆ..

Share Post