CinemaCrime

ದರ್ಶನ್‌ ಜೊತೆ ಬಂಧಿತನಾಗಿರುವ ಪ್ರದೋಶ್‌ ಕೂಡಾ ಚಿತ್ರನಟನಂತೆ!

ಬೆಂಗಳೂರು; ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ ಸೇರಿ 13 ಮಂದಿಯನ್ನು ಬಂಧಿಸಲಾಗಿದೆ.. ಇನ್ನೂ ನಾಲ್ವರು ಆರೋಪಿಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.. ಇನ್ನು ದರ್ಶನ್‌ ಜೊತೆ ಬಂಧಿತರಾದವರಲ್ಲಿ ಒಬ್ಬರಾದ ಪ್ರದೋಶ್‌ ಕೂಡಾ ಚಿತ್ರನಟನಂತೆ..!. ಬಿಜೆಪಿ ಮುಖಂಡರೊಬ್ಬರ ಆಪ್ತ ಸಹಾಯಕನಾಗಿ ಕೆಲಸ ಮಾಡಿಕೊಂಡಿದ್ದ ಪ್ರದೋಶ್‌ ಸಿನಿರಂಗಕ್ಕೆ ಬಂದಿದ್ದಾರೆ.. ದರ್ಶನ್‌ ಜೊತೆ ಗುರುತಿಸಿಕೊಂಡು ಈಗ ಜೈಲು ಸೇರಿದ್ದಾರೆ..

ಬೃಂದಾವನ, ಬುಲ್‌ ಬುಲ್‌ ಸೇರಿದಂತೆ ಹಲವು ಚಿತ್ರಗಳಲ್ಲಿ ಪ್ರದೋಶ್‌ ನಟನೆ ಮಾಡಿದ್ದಾರೆ.. ಈ  ಮೊದಲು ಅವರು ಬಿಜೆಪಿ ಶಾಸಕ ರವಿಸುಬ್ರಹ್ಮಣ್ಯ ಅವರ ಆಪ್ತ ವಲಯದಲ್ಲಿ ಕಾಣಿಸಿಕೊಂಡಿದ್ದರು ಎನ್ನಲಾಗಿದೆ.. ಅನಂತರ ದರ್ಶನ್‌ ಜೊತೆ ಒಡನಾಟ ಬೆಳೆದಿದ್ದರಿಂದ ಚಿತ್ರರಂಗದ ಕಡೆ ಬಂದಿದ್ದು, ಈಗ ಕೊಲೆ ಕೇಸ್‌ ನಲ್ಲಿ ಅಂದರ್‌ ಆಗಿದ್ದಾರೆ.. ಪ್ರದೋಸ್‌ ಈ ಕೇಸ್‌ ನಲ್ಲಿ A-14 ಆರೋಪಿಯಾಗಿದ್ದಾನೆ..

 

Share Post