ಇತ್ತೀಚೆಗೆ ಮೋದಿ ಉದ್ಘಾಟಿಸಿದ್ದ ಟರ್ಮಿನಲ್ ಕುಸಿತ; ಕಾರ್ ಗಳ ಮೇಲೆ ಉರುಳಿದ ಮೇಲ್ಛಾವಣಿ!
ನವದೆಹಲಿ; ಮೂರು ತಿಂಗಳ ಹಿಂದಷ್ಟೇ ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ಮಾಡಿದ್ದ ದೆಹಲಿ ವಿಮಾನ ನಿಲ್ದಾಣದ ಟರ್ಮಿನಲ್ ಒಂದರ ಮೇಲ್ಛಾವಣಿ ಕುಸಿದುಬಿದ್ದಿದೆ. ಕಾರೊಂದರ ಮೇಲೆ ಉರುಳಿಬಿದ್ದಿದ್ದರಿಂದ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದಾನೆ. ಅವಶೇಷಗಳಡಿ ಸಿಲುಕಿ ಐದು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ..
ಟರ್ಮಿನಲ್ ಒಂದರ ನಿರ್ಗಮನ ದ್ವಾರದ ಮೇಲ್ಛಾವಣಿ ಹಾಗೂ ಕಂಬಗಳು ಇದ್ದಕ್ಕಿದ್ದಂತೆ ಕುಸಿದಿವೆ.. ಘಟನೆಯಲ್ಲಿ ಹಲವು ಕಾರುಗಳು ಜಖಂಗೊಂಡಿವೆ.. ಕ್ರೇನ್ ಮೂಲಕ ಅವಶೇಷಗಳಡಿ ಸಿಲುಕಿದವರನ್ನು ರಕ್ಷಣೆ ಮಾಡಲಾಗಿದೆ.. ಘಟನೆ ಹಿನ್ನೆಲೆಯಲ್ಲಿ 28 ವಿಮಾನಗಳ ಹಾರಾಟ ರದ್ದು ಮಾಡಲಾಗಿದೆ..
ದೆಹಲಿ ವಿಮಾನ ನಿಲ್ದಾಣಕ್ಕೆ ಬರುವ 12, ಹೊರಡುವ 16 ವಿಮಾನಗಳ ಸಂಚಾರ ಕ್ಯಾನ್ಸಲ್ ಮಾಡಲಾಗಿದೆ. ಟರ್ಮಿನಲ್ 2, 3ರಲ್ಲಿ ಎಂದಿನಂತೆ ವಿಮಾನಗಳ ಸಂಚಾರ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.. ಮಾರ್ಚ್ ನಲ್ಲಷ್ಟೇ ಟರ್ಮಿನಲ್ ಒಂದನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ಮಾಡಿದ್ದರು.. ಇದಾದ ಮೂರೇ ತಿಂಗಳಿಗೆ ದುರ್ಘಟನೆ ನಡೆದಿದೆ..