National

ರವಿದಾಸ್‌ ಜಯಂತಿಯ ಪ್ರಯುಕ್ತ ನರೇಂದ್ರ ಮೋದಿ ಶಾಬಾದ್‌ ಕೀರ್ತನೆಯಲ್ಲಿ ಭಾಗಿ

ನವದೆಹಲಿ : ಇಂದು ಸಂತ ರವಿದಾಸ್‌ ಅವರ ಜಯಂತಿಯ ಪ್ರಯುಕ್ತ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಸೇರಿದಂತೆ ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರದ ಜನತೆಗೆ ಶುಭ ಹಾರೈಸಿದ್ದಾರೆ.

ಸಂತರು ತೋರಿಸಿದ ಮಾರ್ಗವನ್ನು ಅನುಸರಿಸುವ ಮೂಲಕ ಸಮಾನತೆ ಮತ್ತು ಸೌಹಾರ್ದತೆಯ ಆಧಾರದ ಮೇಲೆ ಸಮಾಜವನ್ನು ನಿರ್ಮಿಸೋಣ ಎಂದು ರಾಮನಾಥ್‌ ಕೋವಿಂದ್‌ ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.

ಇನ್ನು ನರೇಂದ್ರ ಮೋದಿ ಅವರು ಗುರು ರವಿದಾಸ್‌ ವಿಶ್ರಾಮ್‌ ಧಾಮ್‌ ಮಂದಿರದಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಭಕ್ತರೊಂದಿಗೆ ಸಂವಾದ ನಡೆಸಿ ನಂತರ ಕೀರ್ತನೆಗಳಲ್ಲಿ ಭಾಗವಹಿಸಿದ್ದಾರೆ.

ರವಿದಾಸ್‌ ಜಯಂತಿಯನ್ನು ಗುರು ಮಾಘಪೂರ್ಣಿಮೆ ಎಂದು ಆಚರಿಸಲಾಗುತ್ತದೆ. ರವಿದಾಸ್‌ ಸಂತರು 15ನೇ ಮತ್ತು 16ನೇ ಶತಮಾನದಲ್ಲಿ ಭಕ್ತಿ ಚಳವಳಿಯ ಸಂತರಾಗಿದ್ದರು. ಲಿಂಗ ಸಮಾನತೆಯನ್ನು ಉತ್ತೇಜಿಸಿದ್ದರು. ಜಾತಿಯನ್ನು ಲೆಕ್ಕಿಸದೇ ಎಲ್ಲರಿಗೂ ಸಮಾನತೆ ಮತ್ತು ಘನತೆಯನ್ನು ಪ್ರತಿಪಾದಿಸಿದ್ದರು.

ರವಿದಾಸ್‌ ಜಯಂತಿಯ ಪ್ರಯುಕ್ತ ದೆಹಲಿ ಸರ್ಕಾರ ಶಾಲಾ ಕಾಲೇಜುಗಳಿಗೆ ಮತ್ತು ಸರ್ಕಾರಿ ಕಚೇರಿಗಳಿಗೆ ರಜೆ ಘೋಷಿಸಿದೆ.

Share Post