CrimeNational

581 ಕೆಜಿ ಗಾಂಜಾ ಇಲಿಗಳು ತಿಂದ್ಬಿಟ್ಟವಂತೆ; ಪೊಲೀಸರ ಈ ಹೇಳಿಕೆ ನಿಜವೇ..?

ಲಕ್ನೋ; ದಾಳಿ ವೇಳೆ ವಶಪಡಿಸಿಕೊಂಡ 581 ಕೆಜಿ ಗಾಂಜಾವನ್ನು ಇಲಿಗಳು ತಿಂದುಬಿಟ್ಟಿವೆಯಂತೆ. ಹಾಗಂತ ಉತ್ತರ ಪ್ರದೇಶದ ಪೊಲೀಸರು ಕೋರ್ಟ್‌ಗೆ ವರದಿ ನೀಡಿದ್ದಾರೆ. ಉತ್ತರ ಪ್ರದೇಶದ ಮಥುರಾ ಪೊಲೀಸರು ವಿಶೇಷ ನಾರ್ಕೋಟಿಕ್ ಡ್ರಗ್ಸ್ ಮತ್ತಿ ಸೈಕೋಟ್ರೋಪಿಕ್ ಸಬ್‍ಸ್ಟೆನ್ಸ್ ಆಕ್ಟ್ (1985) ನ್ಯಾಯಾಲಯಕ್ಕೆ ಈ ರೀತಿಯ ವರದಿ ನೀಡಿದ್ದು, ಎಲ್ಲರ ಅಚ್ಚರಿಗೆ ಕಾರಣವಾಗಿದೆ.

ವಶಪಡಿಸಿಕೊಂಡ ಗಾಂಜಾದ ವಿವರದ ವರದಿ ಸಲ್ಲಿಸುವಂತೆ ಕೋರ್ಟ್‌ ಪೊಲೀಸರಿಗೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ವರದಿ ನೀಡಿದ್ದು, ಶೇರ್‌ಗಢ್ ಪೊಲೀಸ್ ಠಾಣೆಯಲ್ಲಿ 386 ಕೆಜಿ ಗಾಂಜಾ ಸಂಗ್ರಹಿಸಲಾಗಿತ್ತು. ಹೈವೇ ಪೊಲೀಸ್ ಠಾಣೆಯಲ್ಲಿ 195 ಕೆಜಿ ಗಾಂಜಾ ಇತ್ತು. ಇದನ್ನು ಇಲಿಗಳು ತಿಂದುಬಿಟ್ಟಿವೆ ಎಂದು ಪೊಲೀಸರು ಹೇಳಿದ್ದಾರೆ. ಇದಕ್ಕೆ ಕೋರ್ಟ್‌, ಇದಕ್ಕೆ ಸಾಕ್ಷ್ಯಗಳನ್ನು ಒದಗಿಸುವಂತೆ ಸೂಚಿಸಿದೆ. ನವೆಂಬರ್ 26 ರೊಳಗೆ ಸಾಕ್ಷ್ಯಗಳನ್ನು ಹಾಜರುಪಡಿಸಬೇಕೆಂದು ಆದೇಶ ನೀಡಿದೆ.

Share Post