National

ಕಳ್ಳತನ ಆರೋಪ; ಠಾಣೆಯಲ್ಲೇ ಬಾಲಕ ಆತ್ಮಹತ್ಯೆ..!

ಚಂಡಿಗಢ: ಮೂರು ಸಾವಿರ ರೂಪಾಯಿ ಕಳ್ಳತನ ಮಾಡಿರುವ ಆರೋಪ ಎದುರಿಸುತ್ತಿದ್ದ ಹದಿನೇಳು ವರ್ಷದ ಬಾಲಕನೊಬ್ಬ ಠಾಣೆಯಲ್ಲೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಇಲ್ಲಿನ ಫತೇಹಾಬಾದ್‌ ಪೊಲೀಸ್‌ ಠಾಣೆಯಲ್ಲಿ ಈ ಪ್ರಕರಣ ನಡೆದಿದೆ. ಭಾಟಿಯಾ ಕಾಲೋನಿಯಲ್ಲಿ ಜನವರಿ ೧೧ ರಂದು ಕಳ್ಳತನ ನಡೆದಿತ್ತು. ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದ ವಿನೋದ್‌ ಕುಮಾರ್‌ ಎಂಬುವವರು ಜನವರಿ ೧೧ರಂದು ಮನೆಗೆ ಭಿಗ ಹಾಕಿಕೊಂಡು ಹೊರಗೆ ಹೋಗಿದ್ದರು. ಮರುದಿನ ಅವರು ಬಂದಾಗ ಮನೆಯ ಬೀಗ ಒಡೆದಿತ್ತು. ಒಳಹೋಗಿ ನೋಡಿದರೆ ೩ ಸಾವಿರ ರೂಪಾಯಿ ಕಳ್ಳತನವಾಗಿತ್ತು.

ಈ ಸಂಬಂಧ ವಿನೋದ್‌ ಕುಮಾರ್‌ ಪೊಲೀಸರಿಗೆ ದೂರು ನೀಡಿದ್ದರು. ನೆರೆಹೊರೆಯವರು ಬಾಲಕನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಆತನನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದರು. ಈ ವೇಳೆ ಬಾಲಕ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆಂದು ತಿಳಿದುಬಂದಿದೆ.

 

Share Post