Crime

ಆ ಒಂದು ಮಾತಿಗೆ ಟ್ವಿಟ್ಟರ್‌ನಲ್ಲಿ ರಮೇಶ್‌ ಕುಮಾರ್ ಕ್ಷಮೆ

ಬೆಂಗಳೂರು: ಗುರುವಾರ ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ರಮೇಶ್‌ ಕುಮಾರ್‌ ಅವರು ಅತ್ಯಾಚಾರ ಬಗೆಗೆ ನೀಡಿದ ಹೇಳಿಕೆಗೆ ಕ್ಷಮೆ ಕೋರಿದ್ದಾರೆ. ಅದನ್ನು ನಾನು ಬೇಕಂತ ಹೇಳಿದ್ದಲ್ಲ ಸಂದರ್ಭಕ್ಕನುಣವಾಗಿ ಉದಾಹರಣೆ ನೀಡುವುದಕ್ಕೆ ಹೋಗಿ ಇನ್ನೇನೋ ಆಗಿದೆ. ದಯವಿಟ್ಟು ಆ ಹೇಳಿಕೆಯಿಂದ ನೋವಾಗಿದ್ದಲ್ಲಿ ಕ್ಷಮೆ ಇರಲಿ ಎಂದು ಟ್ವೀಟ್‌ ಮಾಡಿದ್ದಾರೆ. ಅಷ್ಟಕ್ಕೂ ನಿನ್ನೆ ವಿಧಾನಸೌಧದಲ್ಲಿ ನಡೆದಿದ್ದಷ್ಟೇ. ಕಲಾಪ ನಡೆಯುವಾಗ ಅತಿವೃಷ್ಠಿ ಚರ್ಚೆ ಬಗ್ಗೆ ಸುಮಾರು 25 ಶಾಸಕರು ಮಾತನಾಡಿದ್ರೂ ಯಾವುದೇ ಪ್ರಯೋಜನ ಆಗಲಿಲ್ಲ. ಸರ್ಕಾರ ಪರಿಹಾರ ನೀಡುವುದರ ಬಗ್ಗೆ ಯಾವುದೇ ಪ್ರಸ್ತಾಪ ಮಾಡದಿರುವುದನ್ನು ಕಂಡು ವಿಪಕ್ಷಗಳ ಟೀಕೆ ಮತ್ತಷ್ಟು ಹೆಚ್ಚಾಯ್ತು. ಇದಕ್ಕೆ ಬೇಸತ್ತ ಸ್ಪೀಕರ್‌ ಕಾಗೇರಿಯವರು ನಡೆಯುತ್ತಿರುವುದನ್ನು ನೋಡುವುದನ್ನು ಬಿಟ್ಟರೆ ಬೇರೆ ಏನು ಮಾಡ್ಲಿ ನಾನು? ಶಾಸಕರ ಮಾತುಗಳನ್ನು ಕೇಳಿ ಆನಂದಿಸುವುದನ್ನು ಬಿಟ್ರೆ ಬೇರೆ ಏನೂ ಮಾಡೋಕಾಗಲ್ಲ ಎಂಬ ಸ್ಪೀಕರ್ ಅವರ ಮಾತಿಗೆ ಕಾಂಗ್ರೆಸ್‌ ಶಾಸಕ ರಮೇಶ್‌ ಕುಮಾರ್‌ ಧ್ವನಿ ಗೂಡಿಸಿ ʻದೆರ್‌ ಈಸ್‌ ಎ ಸೇಯಿಂಗ್‌, ವೆನ್‌ ರೇಪ್‌ ಈಸ್‌ ಇನೆವಿಟೆಬಲ್‌ ಲೆಟ್‌ ಲೇಡೌನ್‌ ಅಂಡ್‌ ಎಂಜಾಯ್‌ (ಅತ್ಯಾಚಾರದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದಿದ್ದರೆ, ಮಲಗಿ ಆನಂದಿಸಿ) ಎಂದು ಸಂಧರ್ಭಕ್ಕನುಣವಾಗಿ ಉದಾಹರಣೆ ನೀಡಿದ್ರು. ಈ ಮಾತು ನಿನ್ನೆಯಿಂದ ತೀವ್ರ ಚರ್ಚೆಗೆ ಗ್ರಾಸವಾಯಿತು. ಇದರಿಂದ ಎಚ್ಚೆತ್ತುಕೊಂಡ ರಮೇಶ್‌ ಕುಮಾರ್‌ ಅವರು ನಾನು ಅಧಿವೇಶನದಲ್ಲಿ ಆಡಿದ ಅಸಂಬದ್ಧ ಮಾತಿನಿಂದ ಎಲ್ಲರಲ್ಲಿಯೂ ಕ್ಷಮೆಯಾಚಿಸುತ್ತೇನೆ. ಇನ್ನು ಮುಂದೆ ಮಾತನಾಡುವಾಗ ಬಹಳ ಎಚ್ಚರಿಕೆಯಿಂದ ಇರುತ್ತೇನೆ ಎಂದು ಟ್ವೀಟ್‌ ಮೂಲಕ ಕ್ಷಮೆ ಕೋರಿದ್ದಾರೆ.‌

Share Post