ಕೊಳವೆಬಾವಿಗೆ ಬಿದ್ದ ಮಗು ರಕ್ಷಣೆ ಮಾಡಿದ ಎಸ್ಡಿಆರ್ಎಫ್
ಭೂಪಾಲ್: 80 ಅಡಿ ಆಳದ ಕೊಳವೆ ಬಾವಿಗೆ ಬಿದ್ದ ಒಂದು ವರ್ಷದ ಹೆಣ್ಣು ಮಗುವನ್ನು ರಕ್ಷಿಸಿದ ಘಟನೆ ಭೂಪಾಲ್ನ ಛತ್ತರ್ಪುರ ಜಿಲ್ಲೆಯ ಗೌಗಾಂವ್ ಪ್ರದೇಶದಲ್ಲಿ ನಡೆದಿದೆ. ನಿನ್ನೆ ಮಗುವಿನ ತಾಯಿ ಹೊಲದಲ್ಲಿ ಕೆಲಸ ಮಾಡ್ತಿದ್ದ ವೇಳೆ ಅಟವಾಡುತ್ತಿದ್ದ ಮಗು ಇದ್ದಕ್ಕಿದ್ದಂತೆ ಕಾಣೆಯಾಗಿದೆ. ಹುಡುಕಾಟದ ವೇಳಎ ಮಗು ಕೊಳವೆ ಬಾವಿಗೆ ಬಿದ್ದಿರುವ ವಿಚಾರ ತಿಳಿದು ಸ್ಥಳೀಯರು ಪೊಲೀಸರಿಗೆ ಮಾಹಿತಿ ಕೊಟ್ಟಿದ್ದಾರೆ. ಕೂಡಲೇ ಸ್ಥಳಕ್ಕೆ ಪೊಲೀಸರು ಧಾವಿಸಿ ಸುಮಾರು 80 ಅಡಿ ಆಳದಲ್ಲಿ ಮಗು ಸಿಲುಕಿಕೊಂಡಿರುವುದನ್ನು ಗಮನಿಸಿ ಬಾಲಕಿಗೆ ಆಮ್ಲಜನಕ ಸಹಾಯವನ್ನು ನೀಡಿದ್ರು. ನಂತರ ಗ್ವಾಲಿಯರ್ನಿಂದ SDRFತಂಡವನ್ನು ಕರೆಸಿ ಮಗು ರಕ್ಷಣಾ ಕಾರ್ಯಾಚರಣೆಯನ್ನು ಮುಂದುವರೆಸಿದ್ರು. ಕೊಳವೆ ಬಾವಿಗೆ ಸಿಸಿಟಿವಿ ಅಳವಡಿಸಿ ದಿವ್ಯಾಂಶಿ ಚಲನವಲನ ವೀಕ್ಷಿಸಿದ್ರು. ಜೆಸಿಬಿ, ಇತರೆ ಯಂತ್ರಗಳ ಸಹಾಯದಿಂದ ಗುಂಡಿ ತೋಡಿ ಸತತ 10ಗಂಟೆಗಳ ಕಾರ್ಯಾಚರಣೆ ಬಳಿಕ ಮಗುವನ್ನು ಕೊಳವೆಬಾವಿಯಿಂದ ಹೊರತೆಗೆಯಲಾತು. ಹೊರತೆಗೆದ ಮಗುವನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ ಎಂದು ಛತ್ತರ್ಪುರ್ ಜಿಲ್ಲಾಧಿಕಾರಿ ಟ್ವೀಟ್ ಕೂಡ ಮಾಡಿದ್ದಾರೆ. ಇನ್ನು ಮಗುವನ್ನು ಉಳಿಸಿಕೊಟ್ಟಿದ್ದಕ್ಕಾಗಿ ರಕ್ಷನಾ ತಂಡಕ್ಕೆ ದಿವ್ಯಾಂಶಿ ಹೆತ್ತವರು ಕೃತಜ್ಞತೆಗಳನ್ನು ತಿಳಿಸಿದ್ರು.