CrimeNationalNews

ಪ್ರೇಯಸಿಯನ್ನು ಕೊಂದು ಮ್ಯಾನ್‌ಹೋಲ್‌ಗೆ ಎಸೆದ ಅರ್ಚಕ

ಹೈದರಾಬಾದ್; ವಿವಾಹೇತರ ಸಂಬಂಧಗಳು, ಲಿವ್ ಇನ್‌ ರಿಲೇಷನ್‌ಶಿಪ್‌‌ ಗಳು ಇತ್ತೀಚೆಗೆ ಹೆಚ್ಚಾಗುತ್ತಿವೆ. ಇದರ ಜೊತೆ ಇಂತಹ ಸಂಬಂಧಗಳಲ್ಲಿ ಕ್ರೈಂಗಳೂ ಹೆಚ್ಚಾಗುತ್ತಿವೆ. ಮೊನ್ನೆಯಷ್ಟೇ ಮುಂಬೈನಲ್ಲಿ ಲಿವ್‌ ಇನ್‌ ರಿಲೇಷನ್‌ಶಿಪ್‌ನಲ್ಲಿದ್ದ ಯುವತಿಯನ್ನು ಪ್ರಿಯಕರನೇ ಕೊಲೆ ಮಾಡಿ ದೇಹವನ್ನು ಪೀಸ್‌ ಪೀಸ್‌ ಮಾಡಿದ್ದ. ಇದೀ ಹೈದರಾಬಾದ್‌ನಲ್ಲಿ ಅರ್ಚಕನೊಬ್ಬ ತನ್ನ ಪ್ರೇಯಸಿಯನ್ನು ಕೊಲೆ ಮಾಡಿ ಮ್ಯಾನ್‌ ಹೋಲ್‌ಗೆ ಎಸೆದಿದ್ದಾನೆ.

ಅಪ್ಸರಾ ಎಂಬಾಕೆಯನ್ನು ಕೊಲೆ ಮಾಡಿ ಮ್ಯಾನ್‌ಹೋಲ್‌ ಗೆ ಹಾಕಲಾಗಿದೆ. ಅರ್ಚಕ ಅಯ್ಯಗಾರಿ ಸಾಯಿಕೃಷ್ಣ ಎಂಬಾತ ಅಪ್ಸರಾ ಜೊತೆ ವಿವಾಹೇತರ ಸಂಬಂಧ ಇಟ್ಟುಕೊಂಡಿದ್ದ. ಈ ಸಂಬಂಧಕ್ಕೆ ಇಬ್ಬರು ಮಕ್ಕಳು ಕೂಡಾ ಆಗಿವೆ. ಆದರೆ ಮದುವೆಯಾಗುವಂತೆ ಕೇಳಿದಾಗ ಸಾಯಿಕೃಷ್ಣ ನಿರಾಕರಿಸಿದ್ದಾನೆ. ಒತ್ತಡ ಜಾಸ್ತಿಯಾಗುತ್ತಿದ್ದಂತೆ ಆರೋಪಿ, ಅಪ್ಸರಾಳನ್ನು ಕೊಲೆ ಮಾಡಿದ್ದಾನೆ. ನಂತರ ದೇಹವನ್ನು ಮ್ಯಾನ್‌ಹೋಲ್‌ಗೆ ಹಾಕಿದ್ದಾನೆ.

ನಂತರ ಆರೋಪಿಯೇ ಪೊಲೀಸರಿಗೆ ದೂರು ನೀಡಿದ್ದ. ನನ್ನ ಸೋದರ ಸೊಸೆ ಅಪ್ಸರಾ ನಾಪತ್ತೆಯಾಗಿದ್ದಾಳೆ. ಹುಡುಕಿಕೊಡಿ ಎಂದು ದೂರು ನೀಡಿದ್ದ. ತನಿಖೆ ಆರಂಭಿಸಿದ ಪೊಲೀಶರು ಸಿಸಿಟಿವಿ ದೃಶ್ಯಗಳನ್ನು ಸಂಗ್ರಹಿಸಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಸಾಯಿಕೃಷ್ಣ ಮೇಲೆಯೇ ಅನುಮಾನ ಮೂಡಿದೆ. ಆತನನ್ನು ಕರೆಸಿ ವಿಚಾರಣೆ ನಡೆಸಿದಾಗ ಶಂಶಾಬಾದ್‌ನಲ್ಲಿ ಅಪ್ಸರಾಳನ್ನು ಕೊಂದಿದ್ದಾಗಿ ಒಪ್ಪಿಕೊಂಡಿದ್ದಾನೆ. ಅನಂತರ
ತಾನು ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದ ದೇವಸ್ಥಾನದ ಬಳಿಯ ಎಂಆರ್‌ಒ ಕಚೇರಿಯ ಹಿಂಭಾಗದ ಮ್ಯಾನ್‌ಹೋಲ್‌ಗೆ ಶವವನ್ನು ಎಸೆದಿದ್ದಾಗಿ ಒಪ್ಪಿಕೊಂಡಿದ್ದಾನೆ.

 

Share Post