CrimeDistricts

ಕ್ರೀಡಾಕೂಟದ ವೇಳೆ ಆಜಾನ್‌ಗೆ ನೃತ್ಯ; ಹಿಂದೂ ಜಾಗರಣ ವೇದಿಕೆಯಿಂದ ಪ್ರತಿಭಟನೆ

ಉಡುಪಿ; ಶಾಲಾ ಕ್ರೀಡಾಕೂಟದ ವೇಳೆ ಆಜಾನ್‌ಗೆ ಹಿಂದೂ ಮಕ್ಕಳಿಂದ ನೃತ್ಯ ಮಾಡಿಸಿದ್ದಾರೆ ಎಂದು ಆರೋಪಿಸಿ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದ ಘಟನೆ ಉಡುಪಿ ಜಿಲ್ಲೆ ಶಂಕರನಾರಾಯಣದಲ್ಲಿ ನಡೆದಿದೆ. 

ಇಲ್ಲಿನ ಮದರ್‌ ತೆರೆಸಾ ಶಾಲೆಯಲ್ಲಿ  ಇತ್ತೀಚೆಗೆ ವಲಯ ಮಟ್ಟದ ಕ್ರೀಡಾಕೂಟ ಆಯೋಜಿಸಲಾಗಿತ್ತು. ಈ ವೇಳೆ ಹಿಂದೂ, ಮುಸ್ಲಿಂ ಹಾಗೂ ಕ್ರೈಸ್ತ ಹಾಡುಗಳಿಗೆ ವಿದ್ಯಾರ್ಥಿಗಳಿಂದ ಡ್ಯಾನ್ಸ್‌ ಮಾಡಿಸಲಾಗಿತ್ತು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ಇದರ ವಿರುದ್ಧ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.

ಕ್ರೀಡಾಕೂಟ ಶುರುವಾಗುವ ಮೊದಲು ಪ್ರಾರ್ಥನೆ ನಡೆಸಲಾಗಿದೆ. ಈ ವೇಳೆ ಸುಮಾರು ೩೦ ಸೆಕೆಂಡುಗಳ ಕಾಲ ಆಜಾನ್‌ ಪ್ಲೇ ಆಗಿದೆ ಎಂದು ತಿಳಿದುಬಂದಿದೆ.

 

Share Post