CrimeNational

ಗಲ್ಲಿಗಲ್ಲಿಯಲ್ಲಿ ಡ್ರಗ್‌ ಸ್ಮಗ್ಲರ್‌ಗಳನ್ನು ಅಟ್ಟಾಡಿಸಿದ ದೆಹಲಿ ಪೊಲೀಸ್‌ ಪಡೆ

ದೆಹಲಿ: ಅದೆಷ್ಟೋ ವಿದ್ಯಾರ್ಥಿಗಳ ಪಾಲಿಗೆ ಮಹಾಮಾರಿ, ಯುವಕರ, ಹೆಣ್ಣುಮಕ್ಕಳ ವಿಷಸರ್ಪ, ಜನರ ಬದುಕನ್ನು ಹಾಳು ಮಾಡುವ ಡ್ರಗ್ಸ್‌ ಬ್ಯಾನ್‌ ವಿರುದ್ಧ ಹಲವಾರು ಹೋರಾಟಗಳು ನಡೆಯುತ್ತಲೇ ಇವೆ. ಕಂಡಕಂಡಲ್ಲಿ ಡ್ರಗ್ಸ್‌ ಡೀಲರ್‌ಗಳನ್ನು ಹತ್ತಿಕ್ಕಲು ಪೊಲೀಸರು ಕೂಡ ಶತಪ್ರಯತ್ನ ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ನಿನ್ನೆ ಸ್ಮಗ್ಲಂಗ್‌ ಜಾಲವನ್ನು ಹಿಡಿಯಲು ದೆಹಲಿ ಪೊಲೀಸರು ಫೀಲ್ಡಿಗಿಳಿದಿದ್ರು.

ದೆಹಲಿಯಲ್ಲಿ ಮೋಸ್ಟ್‌ ವಾಂಟೆಡ್‌ ಡ್ರಗ್‌ ಡೀಲರ್‌ ಧರಂವೀರ್‌ ಅಲಿಯಾಸ್‌ ಪಲ್ಲಾ ಎಂಬುವವನು ಹಿಡಿಯಲು ಇಂದ್ರಪುರಿಯಲ್ಲಿರವ ಅವನ ನಿವಾಸದ ಮೇಲೆ ದಾಳಿ ಮಾಡಿದ್ರು. ಆದ್ರೆ ಅವನ ಅದೃಷ್ಟ ಚೆನನಾಗಿತ್ತೂ..ಅಥವಾ ಪೊಲೀಸರ ದಾಳಿ ತಿಳಿದಿತ್ತೋ ಏನೋ ಗೊತ್ತಿಲ್ಲ. ಆ ಖದೀಮ ಮನೆಯಲ್ಲಿರಲಿಲ್ಲ. ಇಂದ್ರಪುರಿಯ ಗಲ್ಲಿಗಲ್ಲಿಯಲ್ಲಿ ಅವನಿಗಾಗಿ ಹುಡುಕಾಟ ನಡೆಸಿದ್ರು.

ಆ ವೇಳೆ 50-60ಮಂದಿ ಪಲ್ಲಾ ಸಾಕು ರೌಡಿಗಳು ಪೊಲೀಸರ ಮೇಲೆ ದಾಳಿ ಮಾಡಿದ್ದಾರೆ. ಈ ಕೆಲಸ ಡ್ರಗ್‌ ಡೀಲರ್‌ದೇ ಎಂದು ತಿಳಿದ ಮೇಲೆ ಅವನ ಹಿಡಿಯಲು ಮುಂದಾಗಿದ್ದಾರೆ. ಪೊಲೀಸರು ಕಾರ್ಯಪ್ರವೃತ್ತರಾಗ್ತಿದ್ದಂತೆ ಅವರ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಆತ್ಮರಕ್ಷಣೆಗಾಗಿ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಖಾಕಿ ಗುಂಡೇಟಿಗೆ ಇಬ್ಬರು ಯುವಕರು ಸಿಕ್ಕಿಬಿದ್ದಿದ್ದಾರೆ. ಅದರಲ್ಲೊಬ್ಬ ಡ್ರಗ್‌ ಡೀಲರ್‌ ಪಲ್ಲಾ ಸಂಬಂಧಿ ಎಂದು ಪೊಲೀಸರು ತಿಳಿಸಿದ್ದಾರೆ. ಅಮಿತ್‌ ಮೇಲೂ ಕೂಡ ಆರು ಕೇಸ್‌ಗಳು ದಾಖಲಾಗಿದ್ದು, ಅವನ ಮೂಲಕ ಪಲ್ಲಾನನ್ನು ಹಿಡಿಯುವ ಕಾರ್ಯದಲ್ಲಿ ಮಗ್ನರಾಗಿದ್ದಾರೆ.

Share Post