Health

ನೆಗಡಿ ಬಂದರೆ ಮನೆಯಲ್ಲೇ ಹೀಗೆ ಮಾಡಿ

ವಾತವರಣ ದಿನದಿಂದ ದಿನಕ್ಕೆ ಬದಲಾಗುತ್ತಿದೆ. ಇದ್ದರಿಂದ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಶೀತ, ಜ್ವರ, ಕೆಮ್ಮು , ಕಫ ಬರುವುದು ಸಾಮಾನ್ಯ. ಅಂತಹ ಸಮಯದಲ್ಲಿ ಕೆಲವರು ಆಸ್ಪತ್ರೆಗೆ ಹೋಗುತ್ತಾರೆ, ಇನ್ನು ಕೆಲವರು ಮನೆಯಲ್ಲೇ ಔಷಧಿ ಮಾಡಿಕೊಂಡು ಚೇತರಿಸಿಕೊಳ್ಳುತ್ತಾರೆ. ಆದರೆ ಮಕ್ಕಳಿಗೆ ಒಂದು ವೇಳೆ ಶೀತ ಬಂದರೆ ಸಾಕು ತಡೆದುಕೊಳ್ಳಲು ಆಗುವುದಿಲ್ಲ. ಬಿಸಿ ನೀರಿನಿಂದ ಹಬೆ ಕೊಡುತ್ತಾರೆ. ಕೆಲವರು ಅದಕ್ಕೆ ಹಳ್ಳಿಕಡೆ ತುಳಸಿ ಹಾಕಿಕೊಂದು ಹಬೆ ತಗೊಂಡರೆ, ಇನ್ನು ಕೆಲವರು ಮೆಡಿಕಲ್‌ ನಲ್ಲಿ ಸ್ಟೀಮ್‌ ಟ್ಯಾಬೆಟ್‌ ಮೊರೆ ಹೋಗುತ್ತಾರೆ. ಹೀಗಿರುವಾಗ ಕೆಲ ಮನೆ ಮದ್ದುಗಳಿವೆ.
ನೀರುನ್ನು ಒಂದು ಪಾತ್ರೆಯಲ್ಲಿ ಕಾಯಲು ಬಿಡಬೇಕು ಅದು ತುಂಬ ಬಿಸಿಯಾಗಿ ಕುದಿ-ಕುದಿ ಬರಬೇಕು. ಆ ಕುದಿ ಬಂದ ನೀರಿಗೆ ಸ್ವಲ್ಪ ಅರಿಶಿಣಪುಡಿ ಹಾಕಿ ನೀರು ಕುದಿಯಲು ಬಿಡಬೇಕು. ನಂತರ ಚುಟುಕೆಯಷ್ಟು ಮೆಣಸಿನ ಪುಡಿ ಹಾಕಿ ಕುದಿಸಬೇಕು. ಅದರ ಘಾಟು ಹೋದ್ಮೇಲೆ ಹಬೆ ತೆಗೆದುಕೊಳ್ಳವುದರಿಂದ ಕಟ್ಟಿರುವ ಕಫ ಕರಗಿ ಸ್ವಲ್ಪ ನಿರಾಳ ವಾಗುತ್ತದೆ. ಹೀಗೆ ಮೂರು- ನಾಲ್ಕು ದಿನ ಇದ್ದರಿಂದ ಹಬೆ ತಗೊಂಡರೆ ಬೇಗವೇ ಶೀತ ಮಯವಾಗಿ ಬಿಡುತ್ತದೆ.

Share Post