LifestyleNational

ದೇವರಿಗೂ ಜ್ವರ ಬರುತ್ತಾ..?; ಪುರಿ ಜಗನ್ನಾಥನಿಗೆ ಜ್ವರ, 15 ದಿನ ದರ್ಶನ ಬಂದ್‌!

ಬೆಂಗಳೂರು; ಮನುಷ್ಯರಿಗೆ ಜ್ವರ ಬರೋದು ನೋಡಿದ್ದೇವೆ. ದೇವರಿಗೆ ಜ್ವರ ಬರುತ್ತ ಅಂದ್ರೆ ನಂಬ್ತೀರಾ..? ನೀವು ನಂಬ್ತೀರೋ ಬಿಡ್ತೀರೋ ಆದ್ರೆ ದೇವರಿಗೂ ಜ್ವರ ಬರುತ್ತೆ. ವರ್ಷದಲ್ಲಿ ಹದಿನೈದು ಈ ದೇವರು ಜ್ವರದಿಂದ ಬಳಲುತ್ತಾರೆ. ಆಗ ಯಾರಿಗೂ ದರ್ಶನ ಕೊಡೋದಿಲ್ಲ. ನಾವು ಹೇಳ್ತಾ ಇರೋದು ಪುರಿ ಜಗನ್ನಾಥನ ಬಗ್ಗೆ. ಇಂದು ಪುರಿ ಜಗನ್ನಾಥ ಯಾತ್ರೆ ನಡೆಯುತ್ತಿದೆ. ಆದ್ರೆ, ಕಳೆದ ಹದಿನೈದು ದಿನಗಳಿಂದ ಪುರಿ ಜಗನ್ನಾಥ ಜ್ವರ ಬಂದು ಮಲಗಿದ್ದರು. ಅವರ ಸಹೋದರ ಬಲರಾಮು, ತಂಗಿ ಸುಭದ್ರೆಗೂ ಜ್ವರ ಬಂದಿತ್ತು. ಈಗ ಅವರಿಗೆ ಜ್ವರ ಬಿಟ್ಟಿದೆ. ಹೀಗಾಗಿ ರತೋತ್ಸವ ನಡೆಯುತ್ತಿದೆ. ಪ್ರತಿ ವರ್ಷ ರಥೋತ್ಸವಕ್ಕೂ ಹದಿನೈದು ದಿನ ಮೊದಲು ಇವರಿಗೆ ಜ್ವರು ಶುರುವಾಗುತ್ತೆ. ಹದಿನೈದು ದಿನ ಇನ್ನಿಲ್ಲದಂತೆ ಜ್ವರ ಕಾಡುತ್ತೆ. ಯಾಕೆ ಗೊತ್ತಾ..? ಇಂಟ್ರೆಸ್ಟಿಂಗ್‌ ಸ್ಟೋರಿ ಇಲ್ಲಿದೆ.

ಹೌದು, ಕಳೆದ ಹದಿನೈದು ದಿನಗಳಿಂದ ಪುರಿ ಜಗನ್ನಾಥ ದರ್ಶನವನ್ನು ನಿಲ್ಲಿಸಲಾಗಿತ್ತು. ಯಾಕಂದ್ರೆ ಪ್ರತಿ ವರ್ಷ ಪುರಿ ಜಗನ್ನಾಥನಿಗೆ ಜ್ವರ ಬಂದಾಗ ಅದು ವಾಸಿಯಾಗುವವರೆಗೂ ಪೂಜೆ ನಡೆಯೋದಿಲ್ಲ. 2023ರ ಜ್ಯೇಷ್ಠ ಪೌರ್ಣಿಮೆಯ ದಿನ ಜಗನ್ನಾಥನ ಹುಟ್ಟಿದ ದಿನ. ಹಾಗಂತ ಜನ ನಂಬುತ್ತಾರೆ. ಜಗನ್ನಾಥ ರಥೋತ್ಸವ ಜೂನ್‌ 20ರಿಂದ ನಡೆಯುತ್ತದೆ. ಹೀಗಾಗಿ ಜಗನ್ನಾಥನ ಹುಟ್ಟುಹಬ್ಬದ ದಿನವನ್ನು ಪುರಿಯಲ್ಲಿ ಸ್ನಾನ ಯಾತ್ರೆ ಅಥವಾ ಸ್ನಾನ ಪೌರ್ಣಮಿ ಅಂತ ಕರೀತಾರೆ.

ಅಂದು ಪುರಿ ಮೂಲ ವಿರಾಟ್‌ಗೆ 108 ಬಿಂದಿಗೆಗಳಿಂದ ಸ್ನಾನ ಮಾಡಿಸಲಾಗುತ್ತದೆ. ಇದರಿಂದಾಗಿ ದೇವರಿಗೆ ಜ್ವರ ಬಂದಿದೆ ಎಂದು ಪೂಜಾರಿಗಳು ನಿರ್ಣಯಿಸುತ್ತಾರೆ. ಪುರಿ ಜಗನ್ನಾಥ ದೇಗುಲ ಆವರಣದಲ್ಲಿ ಬಂಗಾರ ಬಾವಿ ಒಂದಿದೆ. ಶೀತಲಾ ದೇವಿ ಆ ಬಾವಿಯನ್ನು ಕಾಪಾಡುತ್ತಾಳೆ. ಆ ಬಾವಿಯನ್ನು ವರ್ಷಕ್ಕೊಮ್ಮೆ ತೆರೆದು ಅದರಲ್ಲಿನ ನೀರಿನಲ್ಲಿ ಪುರಿ ಜಗನ್ನಾಥನಿಗೆ ಅಭಿಷೇಕ ಮಾಡುತ್ತಾರೆ. ಆ ದಿನ ಗರ್ಭಗುಡಿಯಿಂದ  ಮೂಲ ಮೂರ್ತಿಗಳನ್ನು ತಂದು ಸ್ನಾನವೇದಿ ಎಂಬ ಸ್ಥಳದಲ್ಲಿ ಭಕ್ತರೆಲ್ಲರಿಗೂ ಕಾಣಿಸುವ ರೀತಿಯಲ್ಲಿ ವಿಗ್ರಹಗಳನ್ನಿರಿಸಿ ಈ ಬಾವಿಯಿಂದ ತೆಗೆದ 108 ಬಿಂದಿಗೆಗಳ ನೀರಿನಿಂದ ಅಭಿಷೇಕ ಮಾಡಲಾಗುತ್ತದೆ.

ಅಷ್ಟು ನೀರಿನಲ್ಲಿ ತೋಯ್ದರೆ ನಮಗೆ ಕೂಡಾ ಶೀತವಾಗುತ್ತದೆ ಅಲ್ಲವೇ. ಹಾಗೆಯೇ ದೇವರಿಗೂ ಅನಾರೋಗ್ಯ ಉಂಟಾಗುತ್ತದೆ ಎಂಬ ನಂಬಿಕೆ. ಹೀಗಾಗಿ ದೇವರಿಗೆ ಮಾಡಿದ್ದ ಅಲಂಕಾರಗಳನ್ನೆಲ್ಲಾ ತೆಗೆದು ಮಫ್ಲರ್‌ಗಳನ್ನು ಸುತ್ತಿ, ಜ್ವರ ಬಂದವರಿಗೆ ಹೇಗೆ ಮಾಡುತ್ತಾರೋ ಹಾಗೆಯೇ ದೇವರನ್ನೂ ಬೆಚ್ಚಗೆ ಇರಿಸುತ್ತಾರೆ. ಗರ್ಭಗುಡಿಯಲ್ಲಿ ಮೂಲ ವಿಗ್ರಹಗಳು ಇಡುವ ಎಡಗಡೆಯ ಖಾಲಿ ಸ್ಥಳದಲ್ಲಿ ದೇವರುಗಳನ್ನು ಮಲಗಿಸಲಾಗುತ್ತದೆ. ಹೀಗೆ ಹದಿನೈದು ದಿನಗಳ ಕಾಲ ವಿಶ್ರಾಂತಿ ಪಡೆದ ನಂತರ ದೇವರು ಹುಷಾರಾಗುತ್ತಾರೆ. ಜೂನ್‌ 20ರಂದು ಮತ್ತೆ ಭಕ್ತರಿಗೆ ದರ್ಶನ ಕೊಡುತ್ತಾರೆ.

 

Share Post