ಬಳ್ಳಾರಿಯಲ್ಲಿ ಮೂಟೆಗಟ್ಟಲೆ ಚಿನ್ನ-ಬೆಳ್ಳಿ, ಕಂತೆ ಕಂತೆ ಹಣ ಜಪ್ತಿ!
ಬಳ್ಳಾರಿ; ಲೋಕಸಭಾ ಚುನಾವಣೆ ಮತದಾನದ ದಿನಾಂಕ ಹತ್ತಿರವಾಗುತ್ತಿದ್ದಂತೆ ಚುನಾವಣಾ ಅಕ್ರಮಗಳೂ ಜೋರಾಗುತ್ತಿದೆ.. ಇದರ ನಡುವೆ ಚುನಾವಣಾಧಿಕಾರಿಗಳು ಅಕ್ರಮಗಳನ್ನು ತಡೆಯುವ ಪ್ರಯತ್ನ ಮಾಡುತ್ತಿದ್ದಾರೆ.. ಹಲವು ಕಡೆ ದಾಳಿ, ಪರಿಶೀಲನೆಗಳು ನಡೆಯುತ್ತಿದ್ದಾರೆ.. ಬಳ್ಳಾರಿಯ ಮನೆಯೊಂದರ ಮೇಲೆ ದಾಳಿ ಮಾಡಲಾಗಿದ್ದು, ಈ ವೇಳೆ ಅಪಾರ ಪ್ರಮಾಣದ ಹಣ ಹಾಗೂ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ; ಮೋದಿ ಮತ್ತೆ ಪ್ರಧಾನಿಯಾಗಲೆಂದು ಬೆರಳನ್ನೇ ಕತ್ತರಿಸಿ ಕಾಳಿ ದೇವಿಗೆ ಅರ್ಪಣೆ!
ಕಂತೆ ಕಂತೆ ನೋಟು.. ಮೂಟೆ ಮೂಟೆ ಬಂಗಾರ;
ಬಳ್ಳಾರಿ ನಗರದ ಬ್ರೂಸ್ ಪೇಟೆ ಠಾಣಾ ವ್ಯಾಪ್ತಿಯ ಮನೆಯೊಂದರ ಮೇಲೆ ಪೊಲೀಸರು ದಾಳಿ ನಡೆಸಲಾಗಿದ್ದು, ಈ ವೇಳೆ ಮೂಟೆಗಟ್ಟಲೆ ಚಿನ್ನ ಹಾಗೂ ಬೆಳ್ಳಿ ಆಭರಣಗಳು ಸಿಕ್ಕಿವೆ.. ಇದರ ಜೊತೆಗೆ ಕಂತೆ ಕಂತೆ ನೋಟುಗಳು ಪತ್ತೆಯಾಗಿವೆ.. ಇದಕ್ಕೆ ಮನೆಯವರು ಸೂಕ್ತ ದಾಖಲೆಗಳನ್ನು ಒದಗಿಸಿಲ್ಲ.. ಅಲ್ಲದೆ ಮನೆಯಲ್ಲಿ ಇಷ್ಟು ಪ್ರಮಾಣದ ಹಣ ಹಾಗೂ ಚಿನ್ನದ ಸಂಗ್ರಹ ಮಾಡುವುದಕ್ಕೆ ಅವಕಾಶವೂ ಇಲ್ಲ.. ಹೀಗಾಗಿ ಪೊಲೀಸರು ಅದೆಲ್ಲವನ್ನೂ ಜಪ್ತಿ ಮಾಡಿದ್ದಾರೆ..
ಇದನ್ನೂ ಓದಿ; ಉದ್ಯೋಗ ಕಳೆದುಕೊಂಡರೆ ಕ್ರೆಡಿಟ್ ಸ್ಕೋರ್ ಕಡಿಮೆಯಾಗುತ್ತಾ..?
171 ಕೆಜಿ ಬೆಳ್ಳಿ, 3 ಕೆಜಿ ಚಿನ್ನ, 5.60 ಕೋಟಿ ನಗದು ವಶ;
ಬಳ್ಳಾರಿ ನಗರದ ಕಂಬಳಿ ಬಜಾರ್‌ನಲ್ಲಿರುವ ಜುವೆಲರಿ ಶಾಪ್ ಮಾಲೀಕ ನರೇಶ್ ಎಂಬುವವರ ಮನೆ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.. ಈ ವೇಳೆ ಅವರ ಮನೆಯಲ್ಲಿ ಬರೋಬ್ಬರಿ 68 ಕೆಜಿ ಬೆಳ್ಳಿ ಗಟ್ಟಿ, 103 ಕೆಜಿ ಬೆಳ್ಳಿ ಆಭರಣಗಳು, 3 ಕೆಜಿ ಬಂಗಾರ ಹಾಗೂ 5.60 ಕೋಟಿ ರೂಪಾಯಿ ನಗದು ಪತ್ತೆಯಾಗಿದೆ.. ಇದಕ್ಕೆ ಮಾಲೀಕರು ಸೂಕ್ತ ದಾಖಲೆಗಳನ್ನು ಒದಗಿಸಿಲ್ಲ. ಹೀಗಾಗಿ, ಪೊಲೀಸರು ಅವೆಲ್ಲವನ್ನೂ ಜಪ್ತಿ ಮಾಡಿ ಪೊಲೀಸ್ ಠಾಣೆಗೆ ತಂದಿದ್ದಾರೆ.
ಇದನ್ನೂ ಓದಿ; ಸಂತಾನ ಇಲ್ಲದವರು ಇವುಗಳನ್ನು ತಿಂದರೆ ಸಾಕು!
ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟ ಪ್ರಕರಣ;
ಈಗ ಲೋಕಸಭಾ ಚುನಾವಣೆ ನಡೆಯುತ್ತಿದೆ.. ಇಂತಹ ಸಂದರ್ಭದಲ್ಲಿ ಭಾರಿ ಪ್ರಮಾಣದಲ್ಲಿ ಚಿನ್ನ, ಬೆಳ್ಳಿ ಹಾಗೂ ನಗದು ದಾಸ್ತಾನು ಮಾಡಲಾಗಿದೆ.. ಚುನಾವಣೆಯಲ್ಲಿ ಹಂಚಲೆಂದೇ ಈ ಪ್ರಮಾಣದಲ್ಲಿ ದಾಸ್ತಾನು ಮಾಡಲಾಗಿತ್ತಾ ಎಂಬುದರ ಬಗ್ಗೆ ಅನುಮಾನ ವ್ಯಕ್ತವಾಗುತ್ತಿದೆ.. ಈ ಬಗ್ಗೆ ಮನೆ ಮಾಲೀಕ ನರೇಶ್‌ಗೆ ನೋಟಿಸ್ ನೀಡಲಾಗಿದ್ದು, ಇದಕ್ಕೆ ಸಂಬಂಧಿಸಿದ ಸೂಕ್ತ ದಾಖಲೆ ಒದಗಿಸುವಂತೆ ಸೂಚನೆ ಕೊಡಲಾಗಿದೆ..
ಇದನ್ನೂ ಓದಿ; ಶೋಭಾಗೆ ಅಲ್ಲಿ ಗೋಬ್ಯಾಕ್ ಅಂದಿದ್ದಕ್ಕೆ ಇಲ್ಲಿಗೆ ಬಂದಿದ್ದಾರೆ; ಸಿಎಂ