ಹನುಮ ಭಕ್ತರ ಮೇಲೆ ಹರಿದ ಪಿಕಪ್ ವಾಹನ; ಮೂವರ ದಾರುಣ ಸಾವು!
ರಾಯಚೂರು; ಇಂದು ಹನುಮ ಜಯಂತಿ.. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಹನುಮ ಜಯಂತಿ ಆಚರಿಸಲಾಗುತ್ತಿವೆ.. ಇಂತಹ ಸಂಭ್ರಮದ ವೇಳೆಯಲ್ಲೇ ದುರಂತವೊಂದು ನಡೆದುಹೋಗಿದೆ.. ಇಂದು ಮುಂಜಾನೆಯೇ ಹನುಮ ಭಕ್ತರ ಮೇಲೆ ಪಿಕಪ್ ವಾಹನವೊಂದು ಹರಿದಿದ್ದು, ಮೂವರು ಹನುಮ ಭಕ್ತರು ಸಾವನ್ನಪ್ಪಿದ್ದಾರೆ..
ಇದನ್ನೂ ಓದಿ; ಪಾಕ್‌ಗೆ ಹೋಗಲು ತಯಾರಿ ನಡೆಸಿದ್ದ ಬಾಂಬರ್‌ಗಳು; ವಿದೇಶದಿಂದ ಬರ್ತಿತ್ತು ಹಣ!
ಹಿಂದಿನಿಂದ ಡಿಕ್ಕಿ ಹೊಡೆದ ಪಿಕಪ್ ವಾಹನ;
ರಾಯಚೂರು ತಾಲ್ಲೂಕಿನ ಹೆಗ್ಗಸನಹಳ್ಳಿಯಲ್ಲಿ ಈ ದುರ್ಘಟನೆ ನಡೆದಿದೆ.. ಹನುಮ ಭಕ್ತರು ಹನುಮ ಜಯಂತಿ ಹಿನ್ನೆಲೆಯಲ್ಲಿ ಕೃಷ್ಣಾ ನದಿಗೆ ಮಡಿ ನೀರು ತರಲು ಹೋಗಿದ್ದರು.. ನದಿಗೆ ನಡೆದುಕೊಂಡು ಹೋಗುತ್ತಿದ್ದಾಗ ಹಿಂದಿನಿಂದ ಬಂದ ಪಿಪಪ್ ವಾಹನ ಹನುಮ ಭಕ್ತರಿಗೆ ಡಿಕ್ಕಿ ಹೊಡೆದಿದೆ.. ಹೀಗಾಗಿ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೂವರು ಹನುಮ ಭಕ್ತರು ಸಾವನ್ನಪ್ಪಿದ್ದಾರೆ..
ಇದನ್ನೂ ಓದಿ; ವಂಟಮೂರಿ ಪ್ರಕರಣ ಆರೋಪಿಗಳು ರಿಲೀಸ್; ಘನಂಧಾರಿ ಕೆಲಸ ಮಾಡಿದವರ ಮೆರವಣಿಗೆ!
8-10 ಜನ ನಡೆದುಕೊಂಡು ಹೋಗುತ್ತಿದ್ದರು;
ಹೆಗ್ಗಸನಹಳ್ಳಿ ಸಮೀಪದ ಎಂಪಿಸಿಎಲ್ ಕಾಲೋನಿಯ 8-10 ಹನುಮ ಭಕ್ತರು ನದಿಗೆ ತರಳುತ್ತಿದ್ದರು.. ಈ ವೇಳೆ ಪಿಕಪ್ ವಾಹನ ಡಿಕ್ಕಿ ಹೊಡೆದಿದೆ.. ಘಟನೆಯಲ್ಲಿ ಅಯ್ಯನಗೌಡ (30), ಮಹೇಶ (30), ಉದಯಕುಮಾರ (30) ಎಂಬುವವರು ಸಾವನ್ನಪ್ಪಿದ್ದಾರೆ.. ಉಳಿದಿಬ್ಬರಿಗೆ ಗಾಯಗಳಾಗಿದ್ದು, ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ..
ಇದನ್ನೂ ಓದಿ; ಬಿಸಿಲಿಗೆ ಹೋಗುವ ಮುನ್ನ ಎಚ್ಚರ; ಬಿಸಿಲಲ್ಲಿ ಕಾರು ನಿಲ್ಲಿಸಿ ಕೂತರೆ ಡೇಂಜರ್!