ಮೋದಿ ಸರ್ಕಾರ ಬರೀ ಸುಳ್ಳು ಭರವಸೆ ನೀಡುತ್ತೆ; ರಾಹುಲ್ ಗಾಂಧಿ
ಗದಗ; ಮೋದಿಯವರು ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಯ ಮಾತನ್ನಾಡಿದ್ದರು. ಆದ್ರೆ, ಎಂಬಿಎ, ಎಂಜಿನಿಯರಿಂಗ್ ಪದವೀಧದರರು ಈಗ ಡೆಲಿವರಿ ಬಾಯ್‌ಗಳಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹಲ್‌ಗಾಂಧಿ ಆರೋಪ ಮಾಡಿದ್ದಾರೆ. ಗದಗದಲ್ಲಿ ನಡೆದ ಯುವ ಸಂವಾದದಲ್ಲಿ ಅವರು ಮಾತನಾಡಿದರು.
ನಾವು ಅಧಿಕಾರದಲ್ಲಿದ್ದಾಗ 70 ರೂಪಾಯಿ ಇದ್ದ ಪೆಟ್ರೋಲ್ ದರ ಈಗ ನೂರು ರೂಪಾಯಿ ದಾಟಿದೆ, ಎಲ್‌ಪಿಗಿ ದರ 400 ರೂಪಾಯಿ ಇತ್ತು. ಈಗ ಅದು 1200 ರೂಪಾಯಿ ಆಗಿದೆ. ಮೋದಿ ಆಡಳಿತ ಬಂದ ಮೇಲೆ ಅಗತ್ಯ ವಸ್ತುಗಳ ಬೆಲೆ ಭಾರಿ ಏರಿಕೆ ಕಂಡಿದೆ ಎಂದು ಆರೋಪ ಮಾಡಿದರು. ಅದಾನಿ ವಿಚಾರವಾಗಿ ನಾನು ಸಂಸತ್ತಿನಲ್ಲಿ ಪ್ರಶ್ನೆ ಮಾಡಿದೆ. ಆದ್ರೆ ಅದಕ್ಕೆ ಉತ್ತರ ದೊರೆಯಲಿಲ್ಲ. ಬದಲಾಗಿ ನನ್ನ ವಿರುದ್ಧ ಕ್ರಮ ಕೈಗೊಳಲಾಯಿತು. ಬಿಜೆಪಿಯವರು ದ್ವೇಷ ರಾಜಕಾರಣ ಮಾಡುತ್ತಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದರು.