BengaluruCrime

ಪಾಕ್‌ಗೆ ಹೋಗಲು ತಯಾರಿ ನಡೆಸಿದ್ದ ಬಾಂಬರ್‌ಗಳು; ವಿದೇಶದಿಂದ ಬರ್ತಿತ್ತು ಹಣ!

ಬೆಂಗಳೂರು; ಮಾರ್ಚ್‌ 1 ರಂದು ನಡೆದ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದ ಆರೋಪಿಗಳಿಗೆ ವಿದೇಶಗಳಿಂದ ಹಣ ಬರುತ್ತಿತ್ತು ಎಂಬ ವಿಷಯ ಬಯಲಾಗಿದೆ.. ಪಶ್ಚಿಮ ಬಂಗಾಳದಲ್ಲಿ ತಲೆಮರೆಸಿಕೊಂಡಿದ್ದ ಇಬ್ಬರು ಶಂಕಿತ ಉಗ್ರರನ್ನು ಬಂಧಿಸಿದ್ದ ಎನ್‌ಐಎ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.. ಈ ವೇಳೆ ಶಂಕಿತರಿಗೆ ವಿದೇಶಗಳಿಂದ ಹಣಕಾಸಿನ ನೆರವು ಬರುತ್ತಿದ್ದುದು ಬಯಲಾಗಿದೆ.. ಅಷ್ಟೇ ಅಲ್ಲದೆ, ಶಂಕಿತರು ಪಶ್ಚಿಮ ಬಂಗಾಳದ ಮೂಲಕ ಪಾಕಿಸ್ತಾನಕ್ಕೆ ಹಾರಲು ತಯಾರಿ ನಡೆಸಿದ್ದರು ಎಂದು ತಿಳಿದುಬಂದಿದೆ..

ಇದನ್ನೂ ಓದಿ; ವಂಟಮೂರಿ ಪ್ರಕರಣ ಆರೋಪಿಗಳು ರಿಲೀಸ್‌; ಘನಂಧಾರಿ ಕೆಲಸ ಮಾಡಿದವರ ಮೆರವಣಿಗೆ!

ಕೋಲ್ಕತ್ತಾದ ಲಾಡ್ಜ್‌ನಲ್ಲಿದ್ದ ಇಬ್ಬರು ಶಂಕಿತರು;

ರಾಮೇಶ್ವರಂ ಕೆಫೆ ಸ್ಫೋಟದ ಬಳಿಕ ಶಂಕಿತ ಉಗ್ರರು ತಲೆಮರೆಸಿಕೊಂಡಿದ್ದರು.. ಸುಮಾರು ಒಂದೂವರೆ ತಿಂಗಳ ಕಾಲ ಹುಡುಕಾಟ ನಡೆಸಲಾಗಿತ್ತು.. ಕೊನೆಗೆ ಇಬ್ಬರೂ ಕೋಲ್ಕತ್ತಾದ ಲಾಡ್ಜ್‌ ಒಂದರಲ್ಲಿ ತಂಗಿದ್ದರ ಬಗ್ಗೆ ಮಾಹಿತಿ ಬಂದಿತ್ತು.. ಎನ್‌ಐಎ ಅಧಿಕಾರಿಗಳು ಪೊಲೀಸರೊಂದಿಗೆ ತೆರಳಿ ಅವರನ್ನು ಬಂಧಿಸಿ ಕರೆತಂದಿದ್ದಾರೆ.. ಬಾಂಬರ್ ಮುಸ್ಸಾವಿರ್ ಹುಸೇನ್ ಶಾಜಿದ್ ಹಾಗೂ ಅಬ್ದುಲ್ ಮತೀನ್ ತಾಹನನ್ನು ತೀವ್ರ ವಿಚಾರಣೆಗೊಳಪಡಿಸಲಾಗುತ್ತಿದೆ.. ಈ ಆಘಾತಕಾರಿ ವಿಚಾರಗಳು ಹೊರಬಿದ್ದಿವೆ.. ಇಬ್ಬರಿಗೂ ವಿದೇಶಗಳಿಂದ ಹಣ ಬರುತ್ತಿತ್ತು.. ಅದನ್ನು ಖರ್ಚು ಮಾಡಿಕೊಂಡು ವಿಧ್ವಂಸಕ ಕೃತ್ಯಗಳಿಗೆ ಪ್ಲ್ಯಾನ್‌ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.. ಇನ್ನು ಬ್ಲಾಸ್ಟ್‌ ಮಾಡಿದ ಮೇಲೆ ಇಬ್ಬರೂ ಪಾಕಿಸ್ತಾನಕ್ಕೆ ತೆರಳಳು ಎಲ್ಲಾ ರೀತಿಯಲ್ಲೂ ಸಿದ್ಧತೆ ನಡೆಸಿದ್ದರು.. ಒಂದೆರಡು ದಿನ ಲೇಟಾಗಿದ್ದರೆ ಅವರು ಪಾಕಿಸ್ತಾನಕ್ಕೆ ಹೊರಟುಬಿಡುತ್ತಿದ್ದರು ಎನ್ನಲಾಗಿದೆ..

ಇದನ್ನೂ ಓದಿ; ಬಿಸಿಲಿಗೆ ಹೋಗುವ ಮುನ್ನ ಎಚ್ಚರ; ಬಿಸಿಲಲ್ಲಿ ಕಾರು ನಿಲ್ಲಿಸಿ ಕೂತರೆ ಡೇಂಜರ್‌!

ಗೆಳೆಯರ ಬ್ಯಾಂಕ್‌ ಅಕೌಂಟ್‌ಗಳ ಪರಿಶೀಲನೆ;

ಬಂಧಿತ ಆರೋಪಿಗಳಿಬ್ಬರಿಗೂ ವಿದೇಶದಿಂದ ಹಣ ಬರುತ್ತಿತ್ತು.. ಈ ಬಗ್ಗೆ ತನಿಖೆ ನಡೆಸುತ್ತಿದ್ದ ಎನ್‌ಐಎ ತಂಡ  ಆರೋಪಿ ಮುಜಾಮಿಲ್ ನ ಅಕೌಂಟ್‌ಗಳು ಹಾಗೂ ಅವನ ಗೆಳೆಯರ ಬ್ಯಾಂಕ್ ಅಕೌಂಟ್ ಹಾಗೂ ಎಟಿಎಂ ಕಾರ್ಡ್ ಗಳು ಆತನ ಬಳಿ ಇದ್ದವು.. ಅವುಗಳನ್ನು ಪರಿಶೀಲನೆ ಮಾಡಿದಾಗ ವಿದೇಶದಿಂದ ಹಣ ಬಂದಿರುವುದು ಗೊತ್ತಾಗಿದೆ.. ತಪ್ಪಿಸಿಕೊಂಡು ತಿರುಗಾಡುತ್ತಿದ್ದಾಗ ಗೆಳೆಯನ ಅಕೌಂಟ್‌ನಿಂದ ಹಣ ಡ್ರಾ ಮಾಡಿ ಖರ್ಚು ಮಾಡಲಾಗುತ್ತಿತ್ತು ಎಂದು ತಿಳಿದುವಬಂದಿದೆ..

ಇದನ್ನೂ ಓದಿ; ಮಹಿಳಾ ಸಮ್ಮಾನ್‌; ಅತಿ ಹೆಚ್ಚು ಬಡ್ಡಿ ಸಿಗುವ ಯೋಜನೆ ಬಗ್ಗೆ ನಿಮಗೆಷ್ಟು ಗೊತ್ತು..?

ಬಾಂಗ್ಲಾ ಮೂಲಕ ಪಾಕಿಸ್ತಾನಕ್ಕೆ ಹೋಗಲು ಸಂಚು;

ಇಬ್ಬರೂ ಶಂಕಿತರು ಪಶ್ಚಿಮ ಬಂಗಾಳಕ್ಕೆ ತೆರಳಿ,  ಅಲ್ಲಿಂದ ಬಾಂಗ್ಲಾದೇಶದ ಮೂಲಕ ಪಾಕಿಸ್ತಾನ ತಲುಪಲು ಪ್ಲ್ಯಾನ್‌ ಮಾಡಿದ್ದರು.. ಆದ್ರೆ ಎನ್‌ಐಎ ತಂಡ ಅವರನ್ನು ಹಿಡಿಯುವಲ್ಲಿ ಯಶಸ್ವಿಯಾಗಿತ್ತು..

ಇದನ್ನೂ ಓದಿ; ಮೇಷರಾಶಿಯಲ್ಲಿ ಗುರು-ಶುಕ್ರರ ಸಂಗಮ; ದಿಢೀರ್‌ ಧನಾಗಮ ಪಕ್ಕಾ..?

 

Share Post