CrimeDistricts

ವಂಟಮೂರಿ ಪ್ರಕರಣ ಆರೋಪಿಗಳು ರಿಲೀಸ್‌; ಘನಂಧಾರಿ ಕೆಲಸ ಮಾಡಿದವರ ಮೆರವಣಿಗೆ!

ಬೆಳಗಾವಿ; ಮಗ ಗ್ರಾಮದ ಹುಡುಗಿಯೊಬ್ಬಳನ್ನು ಪ್ರೀತಿಸಿ ಆಕೆಯೊಂದಿಗೆ ಓಡಿಹೋಗಿದ್ದ.. ಇದರಿಂದ ಕುಪಿತಗೊಂಡ ಹುಡುಗಿ ಮನೆಯವರು, ಹುಡುಗ ಮನೆ ಧ್ವಂಸ ಮಾಡಿದ್ದರು.. ಅಷ್ಟೇ ಏಕೆ, ಹುಡುಗ ತಾಯಿಯನ್ನು ವಿವಸ್ತ್ರಗೊಳಿಸಿ ಮೆರವಣಿಗೆ ಮಾಡಿ ಪೈಶಾಚಿಕವಾಗಿ ನಡೆದುಕೊಂಡಿದರು.. ಇಂತಹ ಪಾಪಿಗಳನ್ನು ಹಿಡಿದು ಜೈಲಿಗಟ್ಟಲಾಗಿತ್ತು.. ನಾಲ್ಕು ತಿಂಗಳ ಬಳಿಕ ಬೇಲ್‌ ಮೇಲೆ ಅವರು ಹೊರಬಂದಿದ್ದಾರೆ.. ಘನಂಧಾರಿ ಕೆಲಸ ಮಾಡಿದ್ದಾರೆ ಅಂತ ಜೈಲಿನಿಂದ ಹೊರಬಂದ ಅವರಿಗೆ ಹಾರಗಳನ್ನು ಹಾಕಿ ಮೆರವಣಿಗೆ ಮಾಡಿದ್ದಾರೆ..

ಇದನ್ನೂ ಓದಿ; ಬಿಸಿಲಿಗೆ ಹೋಗುವ ಮುನ್ನ ಎಚ್ಚರ; ಬಿಸಿಲಲ್ಲಿ ಕಾರು ನಿಲ್ಲಿಸಿ ಕೂತರೆ ಡೇಂಜರ್‌!

ಕಳೆದ ಡಿಸೆಂಬರ್‌ನಲ್ಲಿ ಬೆಳಗಾವಿ ತಾಲ್ಲೂಕು ವಂಟಮೂರಿ ಗ್ರಾಮದಲ್ಲಿ ಈ ಘಟನೆ ನಡೆದಿತ್ತು.. ಈ ಪ್ರಕರಣ ದೇಶಾದ್ಯಂತ ಸಂಚಲನ ಮೂಡಿಸಿತ್ತು.. ಅದೇ ಗ್ರಾಮದ ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಲಾಗಿತ್ತು.. ಅವರು ಇದೀಗ ಬಿಡುಗಡೆಯಾಗಿದ್ದಾರೆ.. ಅವರಿಗೆ ಹೂವಿನ ಹಾರ ಹಾಕಿ, ಸಿಹಿ ತಿನ್ನಿಸಿ ಅದ್ಧೂರಿಯಾಗಿ ಸ್ವಾಗತ ಮಾಡಿದ್ದು, ನಾಚಿಕೆಗೇಡಿನ ಸಂಗತಿಯಾಗಿದೆ.

 

ಇದನ್ನೂ ಓದಿ; ಮಹಿಳಾ ಸಮ್ಮಾನ್‌; ಅತಿ ಹೆಚ್ಚು ಬಡ್ಡಿ ಸಿಗುವ ಯೋಜನೆ ಬಗ್ಗೆ ನಿಮಗೆಷ್ಟು ಗೊತ್ತು..?

ಘಟನೆ ಸಂಬಂಧ 13 ಮಂದಿಯನ್ನು ಬಂಧಿಸಲಾಗಿತ್ತು.. ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಅವರನ್ನು ಇರಿಸಲಾಗಿತ್ತು.. ಇದೀಗ ಹೈಕೋರ್ಟ್‌ ಅವರಿಗೆ ಷರತ್ತುಬದ್ಧ ಜಾಮೀನು ನೀಡಿದೆ.. ಹೀಗಾಗಿ ನಿನ್ನೆ ಸಂಜೆ ಎಲ್ಲರನ್ನೂ ಜೈಲಿನಿಂದ ಬಿಡುಗಡೆ ಮಾಡಲಾಗಿದೆ.. ಆರೋಪಿಗಳು ಜೈಲಿನಿಂದ ಹೊರಬರುತ್ತಿದ್ದಂತೆ ಜೈಲಿನ ಎದುರೇ ಪ್ರಮುಖ ಆರೋಪಿ ಬಸಪ್ಪ ನಾಯ್ಕ್‌ಗೆ ಹೂಮಾಲೆ ಹಾಕಿ, ಸಿಹಿ ತಿನಿಸಿ ಸ್ವಾಗತಿಸಲಾಗಿದೆ.. ಅಷ್ಟೇ ಅಲ್ಲದೇ,  ಎಲ್ಲಾ ಆರೋಪಿಗಳನ್ನು ವಂಟಮೂರಿ ಗ್ರಾಮದಲ್ಲಿ ಮೆರವಣಿಗೆ ಮಾಡಲು ತಯಾರಿ ನಡೆದಿತ್ತು.. ಆದ್ರೆ ಪೊಲೀಸರು ಅದಕ್ಕೆ ಅವಕಾಶ ಕೊಟ್ಟಿಲ್ಲ.. ಆದರೂ ಕೂಡಾ ಪಟಾಕಿ ಸಿಡಿಸಿ ವಿಕೃತಿ ಮೆರೆಯಲಾಗಿದೆ..

ಇದನ್ನೂ ಓದಿ; ಮೇಷರಾಶಿಯಲ್ಲಿ ಗುರು-ಶುಕ್ರರ ಸಂಗಮ; ದಿಢೀರ್‌ ಧನಾಗಮ ಪಕ್ಕಾ..?

 

Share Post