CrimeNational

ಹೆಚ್ಚುವರಿ ಸಾಂಬಾರು ನೀಡದಿದ್ದಕ್ಕೆ ಆಕ್ರೋಶ; ಹೋಟೆಲ್‌ ಮೇಲ್ವಿಚಾರಕನ ಕೊಲೆ!

ನವದೆಹಲಿ; ಇತ್ತೀಚಿನ ದಿನಗಳಲ್ಲಿ ಮನುಷ್ಯರಲ್ಲಿ ಮಾನವೀಯತೆ ಸಾಯುತ್ತಿದೆ. ಸಣ್ಣ ಪುಟ್ಟ ವಿಷಯಗಳಿಗೂ ಜಗಳವಾಡಿ, ಪ್ರಾಣವನ್ನೇ ತೆಗೆಯುವ ಮಟ್ಟಕ್ಕೆ ಹೋಗುತ್ತಿದ್ದಾರೆ.. ಕ್ಷುಲ್ಲಕ ಕಾರಣಕ್ಕೆ ನಡೆಯುವ ಜಗಳಗಳೇ ಕೊಲೆಯಲ್ಲಿ ಅಂತ್ಯವಾಗುತ್ತಿವೆ… ಅಂತಹದ್ದೇ ಒಂದು ಘಟನೆ ಚೆನ್ನೈನಲ್ಲಿ ನಡೆದಿದೆ.

ಇದನ್ನೂ ಓದಿ; ಶಿವಮೊಗ್ಗದಲ್ಲಿ ಈಶ್ವರಪ್ಪ ಬಂಡಾಯ ಫಿಕ್ಸ್‌; ಯಡಿಯೂರಪ್ಪ ಪುತ್ರನಿಗೆ ಗೆಲುವು ಕಷ್ಟವಾಗುತ್ತಾ..?

ಹೆಚ್ಚುವರಿ ಸಾಂಬರ್‌ ನೀಡದಿದ್ದಕ್ಕೆ ಕೊಲೆ!;

ಹೋಟೆಲ್‌ನಲ್ಲಿ ಹೆಚ್ಚುವರಿ ಸಾಂಬಾರ್ ನೀಡಲಿಲ್ಲ ಎಂಬ ಕಾರಣಕ್ಕೆ ಹೋಟೆಲ್ ಸೂಪರ್ ವೈಸರ್ ನನ್ನು ಕೊಲೆ ಮಾಡಲಾಗಿದ್ದು, ಜನರಲ್ಲಿ ಆತಂಕ ಸೃಷ್ಟಿ ಮಾಡಿದೆ. ಈ ಘಟನೆ ಚೆನ್ನೈನಲ್ಲಿ ನಡೆದಿದೆ. ಮಂಗಳವಾರ ರಾತ್ರಿ ಪಲ್ಲಾವರಂ ಬಳಿಯ ಪಮ್ಮಲ್ ಮುಖ್ಯರಸ್ತೆಯಲ್ಲಿರುವ ಜನಪ್ರಿಯ ರೆಸ್ಟೋರೆಂಟ್‌ನಲ್ಲಿ ಹೆಚ್ಚುವರಿ ಸಾಂಬಾರ್ ಕೇಳುವ ವಿಚಾರದಲ್ಲಿ ತಂದೆ ಮತ್ತು ಮಗ ಹೋಟೆಲ್ ಮೇಲ್ವಿಚಾರಕನ ಜೊತೆಗೆ ಜಗಳ ತೆಗೆದಿದ್ದಾರೆ. ಇದು ವಿಕೋಪಕ್ಕೆ ತಿರುಗಿ ಹೋಟೆಲ್‌ ಮೇಲ್ವಿಚಾರಕನನ್ನೇ ಕೊಲೆ ಮಾಡಲಾಗಿದೆ. ಅನಗಾಪುತ್ತೂರಿನ ಪರಿಗಾರದ ಶಂಕರ್ (55) ಮತ್ತು ಅವರ ಮಗ ಅರುಣ್ ಕುಮಾರ್ (30) ಹೋಟೆಲ್ ಗೆ ಇಡ್ಲಿ ಪಾರ್ಸೆಲ್‌ ತೆಗೆದುಕೊಳ್ಳಲು ಹೋಗಿದ್ದರು. ಈ ವೇಳೆ ಹೆಚ್ಚುವರಿ ಸಾಂಬಾರು ಕೇಳಿದ್ದಾರೆ. ಇದಕ್ಕೆ ಹೋಟೆಲ್‌ ಸಿಬ್ಬಂದಿ ನಿರಾಕರಿಸಿದ್ದು, ಗಲಾಟೆಗೆ ಕಾರಣವಾಗಿದೆ.

ಇದನ್ನೂ ಓದಿ; ಚಿಕ್ಕಬಳ್ಳಾಪುರ; ಸುಧಾಕರ್‌ಗೆ ಕೈತಪ್ಪುತ್ತಾ ಬಿಜೆಪಿ ಟಿಕೆಟ್‌..?; ಅಲೋಕ್‌ ಪರ ಅಷ್ಟೊಂದು ಒಲವು ಯಾಕೆ..?

ಮೊದಲಿಗೆ ಸೆಕ್ಯೂರಿಟಿ ಮೇಲೆ ದಾಳಿ;

ಹೆಚ್ಚುವರಿ ಸಾಂಬಾರು ಪ್ಯಾಕೆಟ್ ನೀಡಲು ಸಾಧ್ಯವಿಲ್ಲ ಎಂದು ಹೋಟೆಲ್‌ ಸಿಬ್ಬಂದಿ ಹೇಳುತ್ತಾರೆ. ಹೀಗಾಗಿ ಅಪ್ಪ-ಮಗ ಇಬ್ಬರೂ ಸಿಬ್ಬಂದಿ ಜೊತೆ ಜಗಳ ತೆಗೆಯುತ್ತಾರೆ. ಅನಂತರ ಅಲ್ಲಿಂದ ಹೊರಟ ಅವರು, ತಮ್ಮ ವಾಹನವನ್ನು ತಕ್ಷಣವೇ ಪಾರ್ಕಿಂಗ್ ಸ್ಥಳದಿಂದ ತೆಗೆದುಕೊಂಡು ಹೋಗುವಂತೆ ಒತ್ತಾಯಿಸಿದ ಇಬ್ಬರು ಸೆಕ್ಯುರಿಟಿಯ ಮೇಲೆ ದಾಳಿ ಮಾಡಲು ಪ್ರಾರಂಭಿಸುತ್ತಾರೆ. ಆದರೆ ಘಟನೆಯನ್ನು ಗಮನಿಸಿದ ಮೇಲ್ವಿಚಾರಕ ಅರುಣ್ ಸ್ಥಳಕ್ಕಾಗಮಿಸಿ ಹಲ್ಲೆ ಮಾಡುವುದನ್ನು ನಿಲ್ಲಿಸುವಂತೆ ಮನವಿ ಮಾಡುತ್ತಾರೆ. ಈ ವೇಳೆ ಅಪ್ಪ-ಮಗ  ಅರುಣ್ ಕುಮಾರ್ ಅವರು ಅರುನ್‌ ಮೇಲೆ ತಲೆ, ಹಣೆ ಮತ್ತು ಕತ್ತಿನ ಮೇಲೆ ಹಲ್ಲೆ ನಡೆಸಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.

ಇದನ್ನೂ ಓದಿ; ವಿರೋಧಿಗಳಿಗೆ ಟಿಕೆಟ್‌ ತಪ್ಪಿಸಿದರಾ ಮಾಜಿ ಸಿಎಂ ಯಡಿಯೂರಪ್ಪ?; ಬಂಡಾಯಕ್ಕೆ ನಲುಗುತ್ತಾ ಕಮಲ ಪಕ್ಷ?

ಇತ್ತೀಚೆಗಷ್ಟೇ ಮದುವೆಯಾಗಿದ್ದ ಅರುಣ್‌;

ಮಾಹಿತಿ ಪಡೆದ ಶಂಕರನಗರ ಪೊಲೀಸರು ಸ್ಥಳಕ್ಕೆ ಆಗಮಿಸಿ ಶಂಕರ್ ಮತ್ತು ಅರುಣ್ ಕುಮಾರ್ ನನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಮೇಲ್ವಿಚಾರಕರು ತಂಜಾವೂರು ಮೂಲದವರಾಗಿದ್ದು, ಚೆನ್ನೈಗೆ ಬಂದು ಕಳೆದ ಕೆಲವು ವರ್ಷಗಳಿಂದ ರೆಸ್ಟೋರೆಂಟ್‌ನಲ್ಲಿ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಅರುಣ್ ಕಳೆದ ವರ್ಷ ತನ್ನ ಗೆಳತಿ ಪವಿತ್ರಾಳನ್ನು ಮದುವೆಯಾಗಿ ಪೊಡಿಚಲೂರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ. ಇದೀಗ ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಇದನ್ನೂ ಓದಿ; ಕಾಂತೇಶ್‌ಗೆ ಟಿಕೆಟ್‌ ಇಲ್ಲ, ಶೆಟ್ಟರ್‌ಗೆ ಟಿಕೆಟ್‌ ಕನ್ಫರ್ಮ್‌ ಇಲ್ಲ!

Share Post