Politics

ವಿ.ಸೋಮಣ್ಣಗೆ ಒಳೇಟು ಭೀತಿ; ಕೈಕೊಡ್ತಾರಾ ಮಾಜಿ ಸಚಿವ ಮಾಧುಸ್ವಾಮಿ..?

ಬೆಂಗಳೂರು; ವಿಧಾನಸಭಾ ಚುನಾವಣೆಯಲ್ಲಿ ಎರಡು ಕ್ಷೇತ್ರಗಳಲ್ಲಿ ಸೋತ ಮೇಲೆ ಮಾಜಿ ಸಚಿವ ವಿ.ಸೋಮಣ್ಣ ಯಡಿಯೂರಪ್ಪ ಹಾಗೂ ವಿಜಯೇಂದ್ರ ವಿರುದ್ಧ ಸಮರವನ್ನೇ ಸಾರಿದ್ದರು.. ಒಂದು ಹಂತದಲ್ಲಿ ಅವರು ಕಾಂಗ್ರೆಸ್‌ ಬಾಗಿಲೊಳಗೆ ಒಂದು ಕಾಲೂ ಇಟ್ಟುಬಿಟ್ಟಿದ್ದರು.. ಆದ್ರೆ ಹೈಕಮಾಂಡ್‌ ನಾಯಕರು ದೆಹಲಿ ಕಳುಹಿಸಿ, ಕಾಂಗ್ರೆಸ್‌ ಸೇರದಂತೆ ಹೇಳಿಕಳುಹಿಸಿದ್ದರು.. ಇದಾದ ಮೇಲೆ ಸೋಮಣ್ಣ ಯಡಿಯೂರಪ್ಪ ಜೊತೆ ಸ್ನೇಹ ಬೆಳೆಸಿದರು.. ಈ ಟಿಕೆಟ್‌ ಕೂಡಾ ತಮ್ಮದಾಗಿಸಿಕೊಂಡಿದ್ದಾರೆ.. ತುಮಕೂರಿನಲ್ಲಿ ವಿ.ಸೋಮಣ್ಣ ಬಿಜೆಪಿ ಅಭ್ಯರ್ಥಿ.. ಜೆಡಿಎಸ್‌ ಮತಗಳೂ ಸೋಮಣ್ಣಗೆ ಸಿಗಲಿವೆ.. ಹೀಗಿದ್ದರೂ ಸೋಮಣ್ಣಗೆ ಭೀತಿ ಅಂತೂ ಇದ್ದೇ ಇದೆ.. ಕಾಂಗ್ರೆಸ್‌ ಅಭ್ಯರ್ಥಿ ಸೋಲಿಸುತ್ತಾರೆ ಅನ್ನೋದಕ್ಕಿಂತ ಸ್ವಪಕ್ಷದವರೇ ನನ್ನನ್ನು ಸೋಲಿಸಿಬಿಟ್ಟರೆ ಅನ್ನೋ ಭಯ ಅಂತೂ ಸೋಮಣ್ಣ ಅವರನ್ನು ಕಾಡುತ್ತಿದೆ.

ಸೋಮಣ್ಣಗೆ ಟಿಕೆಟ್‌ ಗಾಗಿ ಪಟ್ಟು ಹಿಡಿದಿದ್ದ ಬಸವರಾಜು;

ತುಮಕೂರಿನ ಹಾಲಿ ಸಂಸದ ಜಿ.ಎಸ್‌.ಬಸವರಾಜು ರಾಜಕೀಯ ನಿವೃತ್ತಿ ಘೋಷಣೆ ಮಾಡಿದ್ದಾರೆ.. ಹೀಗಾಗಿ ತುಮಕೂರು ಕ್ಷೇತ್ರಕ್ಕಾಗಿ ಮಾಜಿ ಸಚಿವ ವಿ.ಸೋಮಣ್ಣ ಹಾಗೂ ಮಾಧುಸ್ವಾಮಿ ಫೈಟ್‌ ನಡೆಸಿದ್ದರು.. ಮಾಧುಸ್ವಾಮಿಯವರು ಯಡಿಯೂರಪ್ಪ ನನ್ನ ಪರವಾಗಿ ನಿಲ್ಲುತ್ತಾರೆ.. ನನಗೇ ಟಿಕೆಟ್‌ ಕೊಡಿಸುತ್ತಾರೆ ಎಂದು ನಂಬಿದ್ದರು.. ಇತ್ತ ವಿ.ಸೋಮಣ್ಣ ಪರವಾಗಿ ಹಾಲಿ ಸಂಸದ ಜಿ.ಎಸ್‌.ಬಸವರಾಜು ಲಾಬಿ ನಡೆಸಿದ್ದರು.. ಇನ್ನೊಂದೆಡೆ ಕೆಲ ದಿನಗಳ ಹಿಂದೆ ಯಡಿಯೂರಪ್ಪ ಹಾಗೂ ಸೋಮಣ್ಣ ಅವರು ಮುನಿಸಿ ಮರೆತು ಭೆಟಿಯಾಗಿ ಮಾತುಕತೆ ನಡೆಸಿದ್ದರು.. ಹೀಗಾಗಿ ಚಿತ್ರಣ ಬದಲಾಯಿತು. ವಿ.ಸೋಮಣ್ಣಗೆ ಟಿಕೆಟ್‌ ಸಿಕ್ಕಿದೆ.. ಇದರಿಂದ ಮಾಧುಸ್ವಾಮಿಗೆ ನಿರಾಸೆಯಾಗಿದೆ.. ಅಂದಹಾಗೆ, ಮಾಧುಸ್ವಾಮಿ ಸಚಿವರಾಗಿದ್ದಾಗ ಸಂಸದ ಬಸವರಾಜು ಜೊತೆ ಕಿತ್ತಾಡಿಕೊಂಡಿದ್ದರು.. ಹೀಗಾಗಿ ಬಸವರಾಜು ಅವರು ಯಾವುದೇ ಕಾರಣಕ್ಕೂ ಮಾಧುಸ್ವಾಮಿಗೆ ಟಿಕೆಟ್‌ ಕೊಡಬಾರದು ಎಂದು ಪಟ್ಟು ಹಿಡಿದಿದ್ದರು. ಮಾಧ್ಯಸ್ವಾಮಿಗೆ ಟಿಕೆಟ್‌ ಕೊಟ್ಟರೆ ಸೋಲಿಸುತ್ತೇವೆ ಎಂದು ಹೇಳಿದ್ದರು ಎನ್ನಲಾಗಿದೆ. ಕೊನೆಗೆ ಬಸವರಾಜು ಅವರು ಹೇಳಿದಂತೆಯೇ ವಿ.ಸೋಮಣ್ಣಗೆ ಟಿಕೆಟ್‌ ಲಬಿಸಿದೆ..

ಮಾಧುಸ್ವಾಮಿ ಒಳೇಟು ಕೊಡುವ ಭೀತಿಯಲ್ಲಿ ಸೋಮಣ್ಣ;

ಕಾಂಗ್ರೆಸ್‌ನಿಂದ ಮುದ್ದಹನುಮೇಗೌಡರಿಗೆ ಟಿಕೆಟ್‌ ನೀಡಲಾಗಿದೆ.. ಈಗಾಗಲೇ ಅವರು ಪ್ರಚಾರ ಆರಂಭಿಸಿದ್ದಾರೆ.. ಈ ಹಿಂದೆ ಅವರು ಸಂಸದರಾಗಿದ್ದರು.. ಕಳೆದ ಬಾರಿ ಜೆಡಿಎಸ್‌ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದರಿಂದ ಕಾಂಗ್ರೆಸ್‌ ತುಮಕೂರು ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿತ್ತು… ದೇವೇಗೌಡರು ಇಲ್ಲಿ ಸ್ಪರ್ಧೆ ಮಾಡಿ ಸೋತಿದ್ದರು.. ಅನಂತರ ಬಿಜೆಪಿಗೆ ಹೋಗಿ ಬಂದಿರುವ ಮುದ್ದಹನುಮೇಗೌಡ ಸಂಭಾವಿತರು ಎನಿಸಿಕೊಂಡಿದ್ದಾರೆ.. ಕ್ಷೇತ್ರದಲ್ಲಿ ಒಳ್ಳೆಯ ಹೆಸರು ಗಳಿಸಿಕೊಂಡಿದ್ದಾರೆ. ಇನ್ನೊಂದೆಡೆ ಸೋಮಣ್ಣ ಹೊರಗಿನವರು.. ಹೀಗಾಗಿ ಇವರಿಗೆ ಸ್ಥಳೀಯ ಮುಖಂಡರ ಬೆಂಬಲ ಬೇಕು.., ಆದ್ರೆ ಸ್ಥಳೀಯ ಮುಖಂಡರಿಗೆ ಟಿಕೆಟ್‌ ಕೊಡಲಿಲ್ಲ ಎಂಬ ಕಾರಣಕ್ಕೆ ಕೆಲವರಿಗೆ ಮುನಿಸಿದೆ.. ಮಾಧುಸ್ವಾಮಿ ಕೂಡಾ ಸಾಕಷ್ಟು ಬೇಜಾರು ಮಾಡಿಕೊಂಡಿದ್ದಾರೆ. ಇವರೆಲ್ಲಾ ಜೊತೆಯಲ್ಲಿದ್ದುಕೊಂಡೇ ಒಳೇಟು ಕೊಟ್ಟರೆ ಕಷ್ಟ ಅನ್ನೋ ಭಯ ವಿ.ಸೋಮಣ್ಣಗಿದೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ನ ಹಲವು ನಾಯಕರು ದೇವೇಗೌಡರಿಗೆ ಕೈಕೊಟ್ಟಿದ್ದರಿಂದ ಅವರು ಸೋಲಬೇಕಾಯಿತು.

ಕಡಿಮೆಯಾಗಿರುವ ಜೆಡಿಎಸ್‌ ಪ್ರಾಬಲ್ಯ;

ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಒಕ್ಕಲಿಗ ಹಾಗೂ ಲಿಂಗಾಯತ ಮತಗಳು ಹೆಚ್ಚಿನ ಸಂಖ್ಯೆಯಲ್ಲಿವೆ.. ಇದರ ಜೊತೆಗೆ ಕುರುಬ ಮತಗಳೂ ಸಾಕಷ್ಟಿವೆ.. ಕಳೆದ ಲೋಕಸಭಾ ಚುನಾವಣೆ ವೇಳೆಯಲ್ಲಿ ಜೆಡಿಎಸ್ ಇಲ್ಲಿ ತುಂಬಾ ಸ್ಟ್ರಾಂಗ್‌ ಇತ್ತು.. ಆದ್ರೆ ಈಗ ಎಲ್ಲಾ ನಾಯಕರೂ ಪಕ್ಷ ಬಿಟ್ಟು ಹೋಗಿದ್ದಾರೆ.. ಗುಬ್ಬಿ ವಾಸು, ತುಮಕೂರು ಗ್ರಾಮಾಂತರ ಮಾಜಿ ಶಾಸಕ ಗೌರಿಶಂಕರ್‌ ಮುಂತಾದವರು ಈಗ ಕಾಂಗ್ರೆಸ್‌ನಲ್ಲಿದ್ದಾರೆ.. ಕಾಂಗ್ರೆಸ್‌ ಶಾಸಕರೇ ಹೆಚ್ಚಾಗಿ ಗೆದ್ದಿದ್ದಾರೆ.. ಜೊತೆಗೆ ಮುದ್ದ ಹನುಮೇಗೌಡರಿಗೆ ಸಿಂಪಥಿ ಬೇರೆ ಇದೆ.. ಹೀಗಿರುವಾಗಲೇ ಬಿಜೆಪಿ ಹೊರಗಿನ ನಾಯಕ ವಿ.ಸೋಮಣ್ಣರನ್ನು ಕಣಕ್ಕಿಳಿಸಿದೆ.. ಹೀಗಾಗಿ ಈ ಬಾರಿ ಬಿಜೆಪಿಯಲ್ಲಿನ ಕೆಲ ನಾಯಕರೂ ಒಳಗೊಳಗೇ ಸೋಮಣ್ಣ ವಿರುದ್ಧ ಕ್ಯಾಂಪೇನ್‌ ಮಾಡಿದರೂ ಮಾಡಬಹುದು.. ಹೀಗಾಗಿ, ಭೀತಿಯಲ್ಲೇ ವಿ.ಸೋಮಣ್ಣ ಕ್ಯಾಂಪೇನ್‌ ಶುರು ಮಾಡಿದ್ದಾರೆ.. ಹೀಗಾಗಿ, ತುಮಕೂರು ಲೋಕಸಭಾ ಕ್ಷೇತ್ರ ಹಲವು ಕುತೂಹಲಗಳಿಗೆ ಕಾರಣವಾಗಿದೆ..

 

Share Post